ಪೆರ್ಲ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಎಸ್.ಎನ್ ನೇಚರ್ ಕ್ಲಬ್ ವತಿಯಿಂದ ಶಾಲಾ ವಠಾರದಲ್ಲಿ ಹಣ್ಣುಗಳ 75ಸಸಿಗಳನ್ನು ನೆಡಲಾಯಿತು. ಭಾರತೀಯ ಸೇನೆಯ ಯೋಧ, ಉತ್ತಮ ಸೇವಾ ಪದಕ ವಿಜೇತ ಬಾಲಕೃಷ್ಣ ಪಡ್ರೆ ಅವರು ಶಾಲಾ ಗ್ರಂಥಾಲಯ ವಠಾರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಬಿ.ರಾಜೇಂದ್ರ, ಪಿಟಿಎ ಅಧ್ಯಕ್ಷ ಅನಂತೇಶ್ವರ ಪೈ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ ಕಾಟುಕುಕ್ಕೆ, ಸ್ಟಾಫ್ ಕಾರ್ಯದರ್ಶಿ ಎನ್. ಕೇಶವ ಪ್ರಕಾಶ್, ಶಾಲಾ ಎಸ್.ಎನ್ ನೇಚರ್ ಕ್ಲಬ್ ಸಂಯೋಜಕ ಉಮೇಶ್ ಕೆ. ಪೆರ್ಲ, ನೇಚರ್ ಕ್ಲಬ್ ಸದಸ್ಯರು, ಶಿಕ್ಷಕರು ಪಾಲ್ಗೊಂಡಿದ್ದರು. ಶಾಲಾ ವಠಾರದ ಸುಮಾರು 15ಎಕರೆ ಪ್ರದೇಶ ಮುರಕಲ್ಲಿನಿಂದ ಆವೃತವಾಗಿದ್ದು, ನೇಚರ್ ಕ್ಲಬ್ಬಿನ ಸತತ ಎರಡು ದಶಕಗಳ ಪರಿಶ್ರಮದಿಂದ ಬರಡು ಭೂಮಿಯಲ್ಲಿ ಪ್ರಸಕ್ತ ದಟ್ಟ ಕಾಡು ಬೆಳೆಯುವಂತಾಗಿದೆ ಎಂದು ನೇಚರ್‍ಕ್ಲಬ್ ಸಂಯೋಜಕ ಉಮೇಶ್ ಕೆ. ಪೆರ್ಲ ತಿಳಿಸಿದ್ದಾರೆ.
75 ಸಸಿಗಳನ್ನು ನೆಡುವ ಮೂಲಕ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ
0
ಆಗಸ್ಟ್ 17, 2022