HEALTH TIPS

777 ಚಾರ್ಲಿ – ಕಾಸರಗೋಡಿನಲ್ಲಿ ಐವತ್ತನೆಯ ದಿನದ ಸಂಭ್ರಮಾಚರಣೆ. ನೆನಪಿನ ಗಿಡ ಹಸ್ತಾಂತರ.


              ಕುಂಬಳೆ: ಕಾಸರಗೋಡು: ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನುಂಟು ಮಾಡಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ, ಕಾಸರಗೋಡಿನ  ಕಿರಣ್ ರಾಜ್ ನಿರ್ದೇಶನದ 777ಚಾರ್ಲಿ ಚಿತ್ರವು ಇದೀಗ ಐವತ್ತನೆಯ ದಿನದ ಪ್ರದರ್ಶನವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಮ್ಯಾಜಿಕ್ ಫ್ರೇಮ್ಸ್ ಮೆಹಬೂಬ್ ಥಿಯೇಟರ್ ಕಾಂಪ್ಲೆಕ್ಸ್ ಇದರ ಆಡಳಿತ ಮಂಡಳಿಯವರು ಚಾರ್ಲಿ ಸಿನೆಮಾದ ಐವತ್ತನೆಯ ದಿನದ ಪ್ರದರ್ಶನದ ಸಂಭ್ರಮಾಚರಣೆಯನ್ನು ಸಿಹಿತಿಂಡಿ ಹಂಚಿ ಬಳಿಕ, ಚಿತ್ರದ ನಿರ್ದೇಶಕನ ಕುಟುಂಬ ಸದಸ್ಯರಿಗೆ ಗಿಡ ಹಸ್ತಾಂತರಿಸುವ ಮೂಲಕ ನೆರವೇರಿಸಲಾಯಿತು.



                    ಥಿಯೇಟರ್ ಮಾಲಿಕ ಶೈಕ್ ರಿಯಾಝ್ ಹುಸೈನ್ , ಮೇನೇಜರ್ ಬಿ. ರಾಜೇಶ್ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಮಾತನಾಡಿ ನಿರ್ದೇಶಕ ಹಾಗೂ ಚಿತ್ರತಂಡದ ಐದು ವರುಷಗಳ ಅವಿಶ್ರಾಂತ ದುಡಿಮೆ ಸಾರ್ಥಕವಾಗಿದೆ. ಇಂದು ಸಿನೆಮಾ ಯಶಸ್ವಿಯಾಗಲು ಅದನ್ನು ರೂಪಿಸಿದ ಚಿತ್ರತಂಡ ಎಷ್ಟು ಮುಖ್ಯವೋ  ಹಾಗೆಯೇ ಸಹೃದಯಿ ಪ್ರೇಕ್ಷಕರು ಮುಖ್ಯರಾಗುತ್ತಾರೆ. ಈ ನಿಟ್ಟಿನಲ್ಲಿ ಚಾರ್ಲಿಯನ್ನು ಉತ್ತುಂಗಕ್ಕೆ ಕೊಂಡೊಯ್ದ ಪ್ರೇಕ್ಷಕರನ್ನು ಮತ್ತು ಚಿತ್ರತಂಡವು ಅಭಿನಂದಾನಾರ್ಹರು.” ಎಂದರು.
                 ಥಿಯೇಟರ್ ನ ಮಾಲಿಕ ರಿಯಾಝ್ ಮಾತನಾಡಿ, “ಕನ್ನಡ ಚಿತ್ರವೊಂದು ಇತ್ತೀಚೆಗಿನ ದಿನಗಳಲ್ಲಿ ಕಾಸರಗೋಡಿನಲ್ಲಿ ಐವತ್ತು ದಿನಗಳನ್ನು ಪೂರೈಸಿರುವ ಮೂಲಕ ಚಾರ್ಲಿ ಸಿನೆಮಾವು ದಾಖಲೆಯನ್ನುಂಟುಮಾಡಿದೆ. ಇದರ ನಿರ್ದೆಶಕ ಕಾಸರಗೋಡಿನ ಯುವಕ ಎನ್ನುವುದು ಅಭಿಮಾನ ಹಾಗೂ ಸಂಭ್ರಮದ ವಿಷಯ.” ಎಂದರು. ನಿರ್ದೇಶಕ ಕಿರಣ್ ರಾಜ್ ಇವರ ಸಹೋದರ ಭರತ್ ರಾಜ್ ಕೆ, ಬಾಲಕೃಷ್ಣ ನೀರ್ಚಾಲು, ಅರವಿಂದಾಕ್ಷನ್, ಶೇಣಿ ವೇಣುಗೋಪಾಲ, ರವಿಶಂಕರ ದೊಡ್ಡಮಾಣಿ, ಕೀರ್ತನ್ ಕುಮಾರ್ ಸಿ ಎಚ್, ಮೋಹಿತ್ ಕುಮಾರ್, ಯದುನಂದನ, ಮಣಿಕಂಠ ಕೋಟೂರು, ಧನಂಜಯ ಅಣಂಗೂರು ಈ ಮುಂತಾದವರಲ್ಲದೆ ಚಿತ್ರದ ಅಭಿಮಾನಿಗಳು ಪಾಲ್ಗೊಂಡರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries