HEALTH TIPS

780 ದೇಶೀಯ ರಕ್ಷಣಾ ಉತ್ಪಾದನಾ ಘಟಕಗಳಿಗೆ ಅನುಮೋದನೆ

 

              ನವದೆಹಲಿ: ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ 780 ಹೊಸ ರಕ್ಷಣಾ ಉಪಕರಣಗಳ ಉತ್ಪಾದನಾ ಘಟಕಗಳು ಮತ್ತು ಉಪ ವ್ಯವಸ್ಥೆಗಳನ್ನು ದೇಶೀಯ ಉದ್ಯಮಗಳಿಂದ ಮಾತ್ರ ಖರೀದಿಸುವುದಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅನುಮೋದನೆ ನೀಡಿದ್ದಾರೆ.

                 ವಿವಿಧ ರೀತಿಯ ಸೇನಾ ಕ್ಷೇತ್ರಗಳಲ್ಲಿ ಬಳಸುವ ಲೈನ್ ರಿಪ್ಲೇಸ್‌ಮೆಂಟ್ ಯೂನಿಟ್‌ಗಳು, ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ಉತ್ಪಾದಿಸಿ, ಆ ಮೂಲಕ ಆಮದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾಠ ಅನುಮತಿ ನೀಡಿದ ಮೂರನೇ ಪಟ್ಟಿ ಇದಾಗಿದೆ.

            'ರಾಜನಾಥ್ ಸಿಂಗ್ ಅವರು 780 ಆಯಕಟ್ಟಿನ ಲೈನ್ ರಿಪ್ಲೇಸ್‌ಮೆಂಟ್ ಯೂನಿಟ್‌ಗಳ (ಎಲ್‌ಆರ್‌ಯುಗಳು) ಘಟಕಗಳಿಗೆ ಅನುಮೋದಿಸಿದ್ದಾರೆ. ಈ ಪಟ್ಟಿಯು 2021ರ ಡಿಸೆಂಬರ್‌ ಮತ್ತು 2022ರ ಮಾರ್ಚ್‌ನಲ್ಲಿ ಅನುಮೋದಿಸಿದ್ದ ಪಟ್ಟಿಗಳ ಮುಂದುವರಿಕೆಯ ಭಾಗವಾಗಿದೆ. ಈ ಘಟಕಗಳಲ್ಲಿ ತಯಾರಾದ ಉತ್ಪನ್ನಗಳನ್ನು ಸ್ವದೇಶೀಕರಣದ ವರ್ಗದ ಅಡಿಯಲ್ಲಿ ತೆಗೆದುಕೊಳ್ಳಲಾಗುವುದು. ಈ ಮೂಲಕ ರಕ್ಷಣಾ ಉದ್ಯಮದಲ್ಲಿ ಭಾರತವು ಸ್ವಾವಲಂಬನೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ' ಎಂದು ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries