ಪುದುಚೇರಿ: '100 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾಸಿಕ ಸಹಾಯಧನದ ಮೊತ್ತವನ್ನು ₹ 7 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು' ಎಂದು ಪುದುಚೇರಿಯ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ವಿರೋಧಪಕ್ಷ ಡಿಎಂಕೆಯ ನಾಯಕ ಆರ್. ಶಿವ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 'ಇಲ್ಲಿ ಕೆಲವೇ ಮಂದಿ ಶತಾಯುಷಿಗಳಿದ್ದು ಅವರಿಗೆ ಅಗತ್ಯ ನೆರವು ನೀಡಲಾಗುವುದು' ಎಂದರು.
'ಪುದುಚೇರಿಯಲ್ಲಿ ಏಳು ಮಂದಿ ಮಾತ್ರ ನೂರು ವರ್ಷ ತುಂಬಿದ್ದವರಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಅವರಿಗೆ ವೃದ್ಧಾಪ್ಯ ವೇತನ ನೀಡಲಾಗುವುದು. 95 ವರ್ಷ ವಯಸ್ಸಿನ ಹಿರಿಯರಿಗೆ ₹ 3,500 ಮೊತ್ತದ ನೆರವು ನೀಡಲಾಗುವುದು' ಎಂದರು.