ಬದಿಯಡ್ಕ: ಎಡನೀರು ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದ್ವಿತೀಯ ಚಾತುರ್ಮಾಸ್ಯದಂಗವಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಭಜನಾ ಅಭಿಮಾನ-ಅಭಿಯಾನ ಎಂಬ ಕ್ಷೇತ್ರ ಸಂಕೀರ್ತನಾ ಯಾನದ ತಿಂಗಳ 8ನೇ ಸರಣಿ ಕಾರ್ಯಕ್ರಮ ಎಡನೀರು ಶ್ರೀಮಠದಲ್ಲಿ ಭಾನುವಾರ ಜರಗಿತು. ಎಡನೀರು ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಬೆಳಗಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧ.ಮಂ.ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು, ಭಜನಾ ಅಭಿಯಾನದ ಗೌರವಾಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ,ರಾಮಕೃಷ್ಣ ಕಾಟುಕುಕ್ಕೆ ಧ.ಗ್ರಾ.ಯೋಜನಾಧಿಕಾರಿ ಮುಖೇಶ್ ಗಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಂಗವಾಗಿ ವಿವಿಧ ಭಜನಾ ಸಂಘಗಳಿಂದ ಭಜನೆ ಜರಗಿತು.
ಎಡನೀರು ಮಠದಲ್ಲಿ ಚಾತುರ್ಮಾಸ್ಯದಂಗವಾಗಿ ಭಜನಾ ಅಭಿಯಾನ: ಅಭಿಮಾನ ತಿಂಗಳ 8ನೇ ಸಂಕೀರ್ತನಾ ಕಾರ್ಯಕ್ರಮ
0
ಆಗಸ್ಟ್ 02, 2022