ಕಾಸರಗೋಡು: ಕೇರಳ ಕಾರುಣ್ಯ ಲಾಟರಿಯ ಶನಿವಾರ ನಡೆದ ಡ್ರಾದಲ್ಲಿ ಪ್ರಥಮ ಬಹುಮಾನ 80ಲಕ್ಷ ರೂ. ಮೊತ್ತ ಪೆರ್ಲದ ನಿತ್ಯಾಧರ್ ಲಾಟರಿ ಏಜನ್ಸೀಸ್ ಮಾಲಿಕ ರಾಜು ಸ್ಟೀಫನ್ ಬೊಳ್ಕಿನಡ್ಕ ಅವರಿಗೆ ಲಭಿಸಿದೆ. ಇವರು ಖರೀದಿಸಿದ್ದ ಕೆಜಿ 562669ಸಂಖ್ಯೆಯ ಟಿಕೆಟ್‍ಗೆ ಈ ಭಾಗ್ಯ ಒಲಿದಿದೆ.
ರಾಜು ಸ್ಟೀಫನ್ ಪೆರ್ಲ ಪೇಟೆಯಲ್ಲಿ ಲಾಟರಿ ಏಜೆನ್ಸಿ ನಡೆಸುತ್ತಿದ್ದು, ಶುಕ್ರವಾರ ಕಣ್ಣೂರಿನಿಂದ ಅಗಮಿಸಿದ ಸ್ನೇಹಿತ ಲಾಟರಿ ಮಾರಾಟಗಾರರಿಂದ ಈ ಅದೃಷ್ಟಶಾಲಿ ಟಿಕೆಟ್ ಖರೀದಿಸಿದ್ದರು. ದುಬೈಯಲ್ಲಿ ಉದ್ಯೋಗಿಯಾಗಿದ್ದ ಇವರು, ಊರಿಗೆ ವಾಪಸಾದ ನಂತರ ಪೆರ್ಲ ಪೇಟೆಯಲ್ಲಿ ಲಾಟರಿ ಏಜೆನ್ಸಿ ತೊಡಗಿದ್ದರು.
ಕೇರಳ ಕಾರುಣ್ಯ ಲಾಟರಿ: ಪೆರ್ಲಕ್ಕೆ 80ಲಕ್ಷ ರೂ. ಪ್ರಥಮ ಬಹುಮಾನ
0
ಆಗಸ್ಟ್ 28, 2022
Tags