ನವದೆಹಲಿ: ದೆಹಲಿಯಲ್ಲಿ ಬುಧವಾರ ನಾಲ್ಕನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದ್ದು, ನೈಜೀರಿಯಾದ 31 ವರ್ಷದ ಮಹಿಳೆಯೊಬ್ಬರಿಗೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಟ್ಟಿದೆ ಎಂದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಪ್ರಕರಣದೊಂದಿಗೆ, ಭಾರತದಲ್ಲಿ ಮಂಗನ ಕಾಯಿಲೆಯ ಸೋಂಕಿತರ ಸಂಖ್ಯೆ ಒಂಬತ್ತಕ್ಕೆ ಏರಿದೆ. ನೈಜೀರಿಯಾ ಮಹಿಳೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಟ್ಟ ಭಾರತದ ಮೊದಲ ಮಹಿಳೆಯಾಗಿದ್ದಾರೆ.
ಮಹಿಳೆಗೆ ಜ್ವರ ಮತ್ತು ಚರ್ಮದ ಗಾಯಗಳಿವೆ ಮತ್ತು ಅವರನ್ನು ಲೋಕನಾಯಕ ಜೈ ಪ್ರಕಾಶ್(ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಮತ್ತು ಫಲಿತಾಂಶ ಪಾಸಿಟಿವ್ ಬಂದಿದೆ.
ದೆಹಲಿಯ ಮೊದಲ ಮಂಕಿಪಾಕ್ಸ್ ರೋಗಿಯನ್ನು ಸೋಮವಾರ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.