ಬೀಜಿಂಗ್: ಚೀನಾದ ಆಗ್ನೇಯ ಭಾಗದಲ್ಲಿದ್ದ 900 ವರ್ಷ ಹಳೆಯದಾದ ಮರದ ಸೇತುವೆಯು ಬೆಂಕಿ ಅವಘಡಕ್ಕೆ ತುತ್ತಾದ ಕಾರಣ ಕುರಿತು ಚೀನಾ ತನಿಖೆಗೆ ಆದೇಶಿಸಿದೆ.
ಕಲ್ಲಿನ ಐದು ಸ್ತಂಭಗಳ ಮೇಲೆ ನಿಂತಿದ್ದ ಈ ಮರದ ಸೇತುವೆಯು 98 ಮೀಟರ್ ಉದ್ದವಿತ್ತು.
ಹಲವು ಬಾರಿ ಈ ಸೇತುವೆಯನ್ನು ಮರು ನಿರ್ಮಾಣ ಮಾಡಲಾಗಿದ್ದು, ಕಡೆಯದಾಗಿ 1932ರಲ್ಲಿ ಮರು ನಿರ್ಮಾಣಗೊಳಿಸಲಾಗಿತ್ತು.
ಶನಿವಾರ ರಾತ್ರಿ ಬೆಂಕಿ ಅವಘಡ ನಡೆದಿದ್ದು ವಾನ್ ಆನ್ ಸೇತುವೆಗೆ ಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು. ಅವಘಡದಲ್ಲಿ ಯಾರಿಗೂ ಪೆಟ್ಟಾಗಿರಲಿಲ್ಲ. ಈ ಸೇತುವೆಗೆ ಮರದ ಚಾವಣಿ ಇತ್ತು. ಮೂಲ ಸೇತುವೆ ಸೊಂಗ್ ಆಡಳಿತಾವಧಿಯಲ್ಲಿ ನಿರ್ಮಾಣವಾಗಿತ್ತು ಎನ್ನಲಾಗಿದೆ.