ಕುಂಬಳೆ: ತಿಂಗಳ ಹಿಂದೆಯμÉ್ಟೀ ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯೊಂದು ಸಂಪೂರ್ಣ ಹಾನಿಗೊಂಡು ಸಂಚಾರ ಅಯೋಗ್ಯವಾಗಿದ್ದು, ಅಧಿಕೃತರ ವಂಚನೆಗೆ ಸಾಕ್ಷಿಯಾಗಿದೆ.
ಕುಂಬಳೆ ಜಿ.ಎಸ್.ಬಿ.ಎಸ್ ಶಾಲೆಯ ಹಿಂಬದಿಯಿಂದ ಚಿರಂಜೀವಿ ಕ್ಲಬ್, ಕಂಚಿಕಟ್ಟೆ, ಪೆÇಸ್ತಡ್ಕ, ಬದಿಯಡ್ಕ ರಸ್ತೆಗಳನ್ನು ಸಂಪರ್ಕಿಸುವ ಈ ರಸ್ತೆÀ ಮುಖ್ಯ ರಸ್ತೆಯಾಗಿದ್ದು ಕಳೆದ ಒಂದು ತಿಂಗಳ ಹಿಂದೆಯμÉ್ಟೀ ದುರಸ್ತಿಗೊಂಡಿತ್ತು. ಈ ಮೊದಲಿದ್ದ ಕಿತ್ತಿಹೋದ ಅರ್ಧ ಡಾಂಬರಿದ್ದ ರಸ್ತೆಯ ಮೇಲೆಯೇ ಪಂಚಾಯತಿ ಮುಖ್ಯ ಅಭಿಯಂತರರ ಸಹಿತ ಉನ್ನತ ಅಧಿಕಾರಿಗಳ ಮೌನ ಸಮ್ಮತಿಯ ಮೇರೆಗೆ ತೇಪೆಹಚ್ಚಿದ ರೀತಿಯಲ್ಲಿ ಡಾಮರೀಕರಣಗೊಂಡಿದ್ದು ಇದೀಗ ಕಾಮಗಾರಿಗೊಂಡ ಸಂಪೂರ್ಣ ರಸ್ತೆಯ ಟಾರ್ ಮತ್ತೆ ಕಿತ್ತುಹೋಗಿ ಜಲ್ಲಿಕಲ್ಲುಗಳು ಬೇರ್ಪಟ್ಟು ಕೆಲವು ಕಡೆಗಳಲ್ಲಿ ಬೃಹತ್ ಹೊಂಡಗಳು ಬಾಯಿ ತೆರೆದಿವೆ.
ರಸ್ತೆಗಳಲ್ಲಿನ ಹೊಂಡಗಳಿಂದ ನಿರಂತರ ಸಂಭವಿಸುವ ಅಪಘಾತ ಸಾವು ನೋವುಗಳನ್ನು ಮನಗಂಡು ಕಳೆದ ಕೆಲದಿನಗಳ ಹಿಂದೆಯμÉ್ಟೀ ಕೇರಳ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ನೀವು ರಸ್ತೆ ನಿರ್ಮಿಸುವುದು ಪೇಪರ್ ಅಂಟಿಸುವ ಗಮ್ ನಿಂದಲೋ ಎಂದು ಪ್ರಶ್ನಿಸಿತ್ತು...?! ಕಳಪೆ ಕಾಮಗಾರಿಯಿಂದ ಒಂದು ವರ್ಷದೊಳಗೆ ಯಾವ ರಸ್ತೆ ಹದಗೆಡುತ್ತದೆಯೋ ಅಂತಹ
ಗುತ್ತಿಗೆದಾರನ ವಿರುದ್ಧ ವಿಜಿಲೆನ್ಸ್ ಕೇಸು ದಾಖಲಿಸಬೇಕೆಂದು ಆದೇಶಿಸಿತ್ತು. ಈ ಮಧ್ಯೆ ಕುಂಬಳೆಯಲ್ಲೇ ಇತ್ತತ್ತೊಂದು ರಸ್ತೆ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದ್ದು, ಅಧಿಕೃತರ ಅನಾಸ್ಥೆಗೆ ಹಿಡಿದ ಕನ್ನಡಿಯಾಗಿದೆ. ವಾಹನ ನಿಬಿಡ ರಸ್ತೆಯಾದ ಈ ರಸ್ತೆಯನ್ನು ಇನ್ನು ಮುಂದಿನ ಏಪ್ರಿಲ್-ಮೇ ತಿಂಗಳ ತನಕ ಏನೊಂದೂ ಮಾಡುವಂತಿರದ ಕಾರಣ ವಾಹನ ಸಂಚಾರ ಸಂಕಷ್ಟಕ್ಕೆ ಸಿಲುಕಲಿದೆ. ಅಧಿಕೃತರನ್ನು ಈ ಬಗ್ಗೆ
ವಿಚಾರಿಸಿದರೂ ಯಾವ ಹೇಳಿಕೆಯನ್ನೂ ನೀಡಲು ಮುಂದಾಗದೆ ಜಾರಿಕೊಂಡಿರುವುದು ಹಲವು ಸಂಶಯಗಳಿಗೂ ಎಡೆಮಾಡಿದೆ.