ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಯಕ್ಷಗಾನ ವೈಭವ ಭಾನುವಾರ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು.
ಬೆಳಗ್ಗೆ ವೇದಮೂತಿ ಚಂದ್ರಶೇಖರ ನಾವಡ ಅವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ನಡೆದ ಯಕ್ಷಗಾನ ವೈಭವ ಕಾರ್ಯಕ್ರಮದಲ್ಲಿ ಭಾಗವತರಾಗಿ ಸತ್ಯನಾರಾಯಣ ಪುಣಿಂಚಿತ್ತಾಯ, ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಅಜೇರು, ಚೆಂಡೆಯಲ್ಲಿ ಚೈತನ್ಯಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಚಕ್ರತಾಳದಲ್ಲಿ ಆದಿತ್ಯ ಬರೆಗೆರೆ ಸಹಕರಿಸಿದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಯಕ್ಷ ಗಾನ ವೈಭವ
0
ಆಗಸ್ಟ್ 15, 2022
Tags