: ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಶಾ ಅವರು ಮಂಗಳವಾರ ಸರಕಾರದ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) ಜಾಲತಾಣದ ಮೂಲಕ ಸಹಾರಿ ಸಂಘಗಳು ತಮ್ಮ ಉತ್ಪನ್ನಳು ಹಾಗೂ ಸೇವೆಗಳ ಮಾರಾಟಕ್ಕೆ ಅವಕಾಶ ನೀಡುವ ವ್ಯವಸ್ಥೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಸಹಕಾರಿ ಸಂಘಗಳ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಸಹಕಾರಿ
ಸಂಘಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಲು ಜಿಇಎಂನಲ್ಲಿ ನೋಂದಾವಣೆಗೊಳ್ಳಬೇಕೆಂದ ಕರೆ
ನೀಡಿದರು. ಸಹಕಾರಿ ಸಂಸ್ಥೆಗಳ ಮಾರುಕಟ್ಟೆಯನ್ನು ವಿಸ್ತರಿಸಲು ಜಿಇಎಂಗಿಂತ ಉತ್ತಮ
ಮಾರ್ಗ ಇನ್ನೊಂದಿಲ್ಲ ಎಂದು ಹೇಳಿದ ಅವರು ಇದಕ್ಕಾಗಿ ಸಹಕರಿಸುವಂತೆ ಭಾರತದ ರಾಷ್ಟ್ರೀಯ
ಸಹಕಾರಿ ಒಕ್ಕೂಟಕ್ಕೆ ಮನವಿ ಮಾಡಿದರು. ಮೊದಲ ಹಂತದಲ್ಲಿ 100 ಕೋಟಿ ರೂ.ಗಿಂತ ಅಧಿಕ
ಠೇವಣಿ ಅಥವಾ ವಹಿವಾಟನ್ನ್ನು ಹೊಂದಿರುವ ಸಹಕಾರಿ ಸಂಸ್ಥೆಗಳು, ಬ್ಯಾಂಕುಗಳಿಗೆ
ಜಿಇಎಂನಲ್ಲಿ ಅವಕಾಶ ನೀಡಲಾಗುವುದು.ಸುಮಾರು 587 ಅರ್ಹ ಸಹಕಾರಿ ಸಂಸ್ಥೆಗಳನ್ನು ಈ
ಶ್ರೇಣಿಯಲ್ಲಿ ಗುರುತಿಸಲಾಗಿದೆ.
ರಾಷ್ಟ್ರೀಯ ಖರೀದಿ ಜಾಲತಾಣವಾಗಿ ಜಿಇಎಂನ್ನು ಆರು
ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರದದ ಇಲಾಖೆಗಳು,
ಸಾರ್ವಜನಿಕರಂಗ ಘಟಕಗಳು ಇತ್ಯಾದಿಗಳಿಗೆ ಮಾರುಕಟ್ಟೆ ತಾಣವಾಗಿ ಅದನ್ನು
ಬಳಸಲಾಗುತ್ತಿತ್ತು. 10 ಸಾವಿರಕ್ಕೂ ಅಧಿಕ ಉತ್ಪನ್ನಗಳು ಹಾಗೂ 288 ಸೇವೆಗಳನ್ನು
ಜಿಇಎಂನಲ್ಲಿ ಪಟ್ಟಿ ಮಾಡಲಾಗಿದೆ.