ಪೆರ್ಲ: ಇಲ್ಲಿಯ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲಾ 2022-23ರ ಶೈಕ್ಷಣಿಕ ವರ್ಷದ ಮಹಾಸಭೆ ಇತ್ತೀಚೆಗೆ ಜರುಗಿತು. ಶಾಲಾ ರಕ್ಷಕ ಶಿಕ್ಷಕ ಸಂಘದ(ಪಿಟಿಎ) ಅಧ್ಯಕ್ಷ ಅಶ್ರಫ್ ಅಮೀಗೊ ಅಧ್ಯಕ್ಷತೆ ವಹಿಸಿದ್ದರು. 2022-23 ಶೈಕ್ಷಣಿಕ ವರ್ಷದ ನೂತನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಜ್ಯೋತಿಲಕ್ಷ್ಮಿ ಕಾಕುಂಜೆ, ಉಪಾಧ್ಯಕ್ಷರಾಗಿ ರಘುರಾಮ, ಮಾತೃ ಸಂಘದ ಅಧ್ಯಕ್ಷರಾಗಿ ಶ್ರೀಕೃಪಾ ಪರ್ಪಕರ್ಯ, ಉಪಾಧ್ಯಕ್ಷರಾಗಿ ಮಮತ ನಲ್ಕ , ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಗಣೇಶ್ ಭಟ್ ಮುಣ್ಚಿಕ್ಕಾನ, ಉಪಾಧ್ಯಕ್ಷರಾಗಿ ಚಂದ್ರಿಕಾ ಭಟ್ ಪೆರ್ಲ, ಸ್ಪೋಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿ ಹಮೀದ್ ಕುರೆಡ್ಕ, ಉಪಾಧ್ಯಕ್ಷೆಯಾಗಿ ವಿನೋದಾಮೋಹನ್ ಆಯ್ಕೆಗೊಂಡಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಹೊಸ ಸಮಿತಿಗೆ ಶುಭಹಾರೈಸಿದರು. ಹಿರಿಯ ಶಿಕ್ಷಕಿ ಸುಶೀಲಾ ಟೀಚರ್, ಶಿಕ್ಷಕ ಕೋಟೆ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಕಲಂದರ್ ಬೀಬಿ ಸ್ವಾಗತಿಸಿ, ಶಿಕ್ಷಕಿ ಸಂಧ್ಯಾ ವಂದಿಸಿದರು. ಶಿಕ್ಷಕ ಉದಯ ಸಾರಂಗ ಕಾರ್ಯಕ್ರಮ ನಿರೂಪಿಸಿದರು.
ಪೆರ್ಲ ಶಾಲಾ ನೂತನ ಪಿಟಿಎ ರೂಪೀಕರಣ: ಪಿಟಿಎ ಅಧ್ಯಕ್ಷರಾಗಿ ಜ್ಯೋತಿಲಕ್ಷ್ಮೀ ಕಾಕುಂಜೆ ಆಯ್ಕೆ
0
ಆಗಸ್ಟ್ 12, 2022