ತಿರುವನಂತಪುರ: ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶ ವಿತರಿಸುವ ಯೋಜನೆ ಕೇಂದ್ರ ಸರ್ಕಾರದ ನಿಧಿಯಿಂದ ಜಾರಿಯಾಗುತ್ತಿದ್ದು, ಈ ಯೋಜನೆ ರಾಜ್ಯ ಸರ್ಕಾರದ್ದು ಎಂದು ಸಚಿವರು ಬಿಂಬಿಸಲು ಯತ್ನಿಸುತ್ತಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದೆ.
ಯೋಜನೆಗೆ ಕೇಂದ್ರ ಮಂಜೂರು ಮಾಡಿರುವ ಮೊತ್ತದ ನಕಲು ಸಹಿತ ಸುದ್ದಿಯನ್ನು ಜನಂ ಟಿವಿ ವರದಿ ಮಾಡಿತ್ತು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಾಗಲೂ ಸಿಪಿಎಂ ಮತ್ತು ಸರಕಾರ ಯಾವುದೇ ಮುಲಾಜಿಲ್ಲದೆ ಯೋಜನೆ ರಾಜ್ಯ ಸರಕಾರದ್ದು ಎಂದು ಬಿಂಬಿಸುತ್ತಿದೆ.
ಶಿಶುಗಳಿಗೆ ಹಾಲು ಮತ್ತು ಮೊಟ್ಟೆ ನೀಡುವ ಯೋಜನೆ ತಮ್ಮದು ಎಂದು ರಾಜ್ಯ ಸರ್ಕಾರ ದೊಡ್ಡ ಪ್ರಚಾರ ಮಾಡಿತು. ಜನಂ ಟಿವಿಯ ಸುದ್ದಿಯು ಸರ್ಕಾರದ ಈ ವಾದಗಳು ಸುಳ್ಳಾಗಿದೆ. ಈ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಶು ಅಭಿವೃದ್ಧಿ ಇಲಾಖೆಯ 33115 ಅಂಗನವಾಡಿಗಳು ಈ ಸೇವೆಯನ್ನು ಪಡೆಯಲಿವೆ. ಈ ಯೋಜನೆಗಾಗಿ 10ನೇ ಮಾರ್ಚ್ 2022 ರಂದು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ 58 ಕೋಟಿ ರೂ. ಮಂಜೂರುಮಾಡಿತ್ತು. ಆದರೆ ಕೇಂದ್ರದ ಯೋಜನೆಯನ್ನು ರಾಜ್ಯ ಸರ್ಕಾರದ ಯೋಜನೆಯನ್ನಾಗಿ ಪರಿವರ್ತಿಸಿ ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ ವಿತರಿಸಿದ ಪಿಣರಾಯಿ ಸರ್ಕಾರ ದೇಶದಲ್ಲೇ ಪ್ರಥಮ ಎಂದು ಮಂತ್ರಿಗಳು ದೊಡ್ಡ ಪ್ರಚಾರ ಮಾಡುತ್ತಿದ್ದಾರೆ.
ಜೂನ್ 15ರಂದು ಕೇಂದ್ರ ಸರಕಾರವೂ ಪೌಷ್ಟಿಕಾಂಶ ಯೋಜನೆಗೆ 60 ಕೋಟಿ ರೂ. ನೀಡಿತ್ತು. ಈ ಮೊತ್ತದಲ್ಲಿ ರಾಜ್ಯ ಸರ್ಕಾರ ಹಾಲು ಮತ್ತು ಮೊಟ್ಟೆ ವಿತರಣೆ ಯೋಜನೆ ಆರಂಭಿಸಿದೆ. ಮಗುವಿನ ಪೆÇೀಷಣೆಗಾಗಿ ಈ ಮೊತ್ತ ವಿನಿಯೋಗಿಸಬೇಕಾಗಿದೆ.
ಇದಕ್ಕಾಗಿ ಕೇಂದ್ರ ಸರಕಾರ ರಾಜ್ಯ ಸರಕಾರದ ಖಾತೆಗೆ ಪ್ರತಿ ವರ್ಷ ಕೋಟ್ಯಂತರ ರೂ. ನೀಡುತ್ತದೆ. ಆದರೆ ರಾಜ್ಯ ಸರ್ಕಾರ ಯಾವುದೇ ಹಿಂಜರಿಕೆಯಿಲ್ಲದೆ ಈ ಮೊತ್ತವನ್ನು ತಮ್ಮದೆಂದು ಬಿಂಬಿಸಿ ತಮ್ಮದೇ ಯೋಜನೆಯಾಗಿ ಪರಿವರ್ತಿಸಿಕೊಳ್ಳುತ್ತಿದೆ.
ಅಂಗನವಾಡಿ ಮಕ್ಕಳಿಗೆ ಪೌಷ್ಟಿಕಾಂಶ ಯೋಜನೆ: ಮೊತ್ತ ಕೇಂದ್ರದ್ದು, ರಾಜ್ಯ ಸರ್ಕಾರದಿಂದ ತನ್ನದೆಂದು ಬಿಂಬಿಸುವ ಯತ್ನ: ಟೀಕೆ
0
ಆಗಸ್ಟ್ 06, 2022