ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಕಾವ್ಯ ಝೇಂಕಾರ ಕಾರ್ಯಕ್ರಮ ನೆಲ್ಲಿಕುಂಜೆಯ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು.
ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ಹಾಗೂ ಅತ್ಯಂತ ಶ್ರೀಮಂತ ಭಾಷೆಯಾಗಿರುವ ಕನ್ನಡ ನಾನಾ ಪ್ರಾಕಾರಗಳೊಂದಿಗೆ ಅಪಾರ ಜ್ಞಾನ ಸಂಪತ್ತಿನಿಂದ ಕೂಡಿದೆ. ಗುಪ್ತವಾಗಿರುವ ಕಾವ್ಯದ ಅಂತಸ್ಸತ್ವವನ್ನು ದರ್ಶಿಸಲು ಪರಂಪರಾಗತ ಹಾಡಿನ ಮಟ್ಟದಿಂದ ಗದ್ಯ ರೂಪದಲ್ಲಿ ವ್ಯಾಖ್ಯಾನಿಸುವ ಗಮಕ ಕಲೆಯೂ ಶ್ರೇಷ್ಠವಾದುದು ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಪ್ರಾಂಶುಪಾಲ ಖ್ಯಾತ ಗಮಕಿ ಡಾ. ಶಶಿರಾಜ ನೀಲಂಗಳ ಅವರು ತೊರವೆ ರಾಮಾಯಣದ ವಿಭೀಷಣ ನೀತಿ ಕಾವ್ಯ ಭಾಗವನ್ನು ಹಾಡಿದರು. ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ. ಬೇ.ಸಿ ಗೋಪಾಲಕೃಷ್ಣ ವ್ಯಾಖ್ಯಾನಿಸಿದರು. ಶಿಕ್ಷಕಿ ರಾಧಾಲಕ್ಷ್ಮೀ ಸ್ವಾಗತಿಸಿದರು. ಶಿಕ್ಷಕ ಸೂರ್ಯನಾರಾಯಣ ಭಟ್ ವಂದಿಸಿದರು.
ಕಸಾಪ ವತಿಯಿಂದ ಕಾವ್ಯ ಝೇಂಕಾರ ಕಾರ್ಯಕ್ರಮ
0
ಆಗಸ್ಟ್ 08, 2022