ಪೆರ್ಲ : ಆರ್.ಎಸ್.ಬಿ. ಯುವ ಸಂಘ ಮೊಗೇರು ಇದರ ವಾರ್ಷಿಕ ಮಹಾಸಭೆ ಮೊಗೇರು ದೇವಸ್ಥಾನದಲ್ಲಿ ಜರಗಿತು, ಸತೀಶ್ ಭಟ್ ಮೊಗೇರು ಹಾಗು ಗಣೇಶ್ ಭಟ್ ಮೊಗೇರು ಇವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ಸಂಘಕ್ಕೆ ಆರಂಭ ದಿಂದಲೂ ಪೆÇ್ರೀತ್ಸಾಹ, ಸಹಕಾರ ನೀಡುತ್ತಾ ಅಗಲಿದ ಶ್ರೀನಾಥ್ ಭಟ್ ಹಾಗು ಚಂದು ಅಣ್ಣ ರವರ ಆತ್ಮ ಶಾಂತಿಗಾಗಿ ಪ್ರಾರ್ಥಿಸಲಾಯಿತು.
ಸಂಘ ಆರಂಭ ದಿಂದ ಈವರೆಗಿನ ಸಂಘದ ಸಾಧನೆ, ಕ್ರೀಡೆ ಮುಂತಾದ ಮಹತ್ತರ ವಿಷಯಗಳ ವರದಿಯನ್ನು ಕಾರ್ಯದರ್ಶಿ ನವೀನ್ ಕುಮಾರ್ ರವರು ಮಂಡಿಸಿದರು. ಈ ವೇಳೆ ಸಂಘದ ಅಧ್ಯಕ್ಷ ನಿತೇಶ್ ನಾಯಕ್, ಸತೀಶ್ ಕುಡ್ತಡ್ಕ ಹಾಗು ಸಂಘದ ಸದಸ್ಯರು ಹಾಜರಿದ್ದರು. ಸಂಘದ ವಾರ್ಷಿಕ ಖರ್ಚು ವೆಚ್ಚಗಳ ಲೆಕ್ಕವನ್ನು ರವೀಂದ್ರ ನಾಯಕ್ ಪೆರ್ಲ ಮಂಡಿಸಿದರು.
ವಾರ್ಷಿಕ ಸಭೆಯ ನಿಮಿತ್ತ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವ ಅಧ್ಯಕ್ಷರಾಗಿ ರಘುರಾಮ ಬೋರ್ಕರ್ ಶೇಣಿ, ಅಧ್ಯಕ್ಷರಾಗಿ ಸತೀಶ್ ಭಟ್ ಮೊಗೇರು ಹಾಗು ಉಪ ಅಧ್ಯಕ್ಷರಾಗಿ ಸತೀಶ್ ನಾಯಕ್ ಕುಡ್ತಡ್ಕ ಆಯ್ಕೆ ಯಾದರು. ಕಾರ್ಯದರ್ಶಿಯಾಗಿ ಬಿ.ಎಸ್ ನಾಯಕ್ ಪೆÇಸಕಂಡ, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಶೇಣಿ ಆಯ್ಕೆ ಯಾದರು. ಕೋಶಾಧಿಕಾರಿ ಯಾಗಿ ಪ್ರಶಾಂತ್ ಖಂಡಿಗೆ ಇವರನ್ನು ಆಯ್ಕೆ ಮಾಡಲಾಯಿತು.