ಕಾಸರಗೋಡು: ಪ್ರವಾಸೋದ್ಯಮ ವಲಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ನೀಲೇಶ್ವರಂ ಕೊಟ್ಟಪುರಂ ಬೋಟ್ ಟರ್ಮಿನಲ್ ನಿರ್ಮಾಣ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಶಾಸಕರನ್ನೊಳಗೊಂಡ ತಂಡ ಅವಲೋಕನ ನಡೆಸಿತು. ಶಾಸಕ ಎಂ. ರಾಜಗೋಪಾಲನ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅವರು ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಮೌಲ್ಯಮಾಪನ ನಡೆಸಿದರು.
ಕಾಮಗಾರಿ ಪೂರ್ತಿಗೊಳಿಸಲಿರುವ ಕೆಲವೊಂದು ಅಡ್ಡಿಆತಂಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೋಟ್ ಟರ್ಮಿನಲ್ ವರೆಗಿನ ರಸ್ತೆ ಕಾಮಗಾರಿಯನ್ನು ತ್ವರಿತ ಹಾಗೂ ತುರ್ತಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಅಂತಿಮ ಹಂತದಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಶಾಸಕ ಹಾಗೂ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಪ್ರವಾಸೋದ್ಯಮ ಉಪನಿರ್ದೇಶಕ ಎಂ.ಹುಸೇನ್, ಬಿಆರ್‍ಡಿಸಿ ಎಂಡಿ ಶಿಜಿನ್ ಪರಂಬತ್, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್,ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್, ಬಿಆರ್‍ಡಿಸಿ ತಾಂತ್ರಿಕ ವ್ಯವಸ್ಥಾಪಕ ಕೆ.ಎಂ.ರವೀಂದ್ರನ್, ಬಿಆರ್‍ಡಿಸಿ ವ್ಯವಸ್ಥಾಪಕ ಯು.ಎಸ್.ಪ್ರಸಾದ್, ಉತ್ಪಾದನಾ ಕೇಂದ್ರದ ಪ್ರತಿನಿಧಿ ಪಿ.ಆರ್.ಸುಂದರೇಶನ್, ಇನ್‍ಲ್ಯಾಂಡ್ ನ್ಯಾವಿಗೇಷನ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನೂಪ್, ಪ್ರವಾಸೋದ್ಯಮ ಪ್ರಾಜೆಕ್ಟ್ ಎಂಜಿನಿಯರ್ ಶಮ್ನಾ, ಸಹಾಯಕ ಪ್ರವಾಸಿ ಮಾಹಿತಿ ಅಧಿಕಾರಿ ಬಾಬು ಮಹೇಂದ್ರನ್, ಗುತ್ತಿಗೆದಾರ ಎಂ.ಎಸ್. ಅಬ್ದುಲ್ ಹಕೀಂ ಉಪಸ್ಥಿತರಿದ್ದರು.
ಪ್ರವಾಸೋದ್ಯಮ ಅಭಿವೃದ್ಧಿ: ಕೊಟ್ಟಾಪುರಂ ಬೋಟ್ ಟರ್ಮಿನಲ್ ನಿರ್ಮಾಣ ಕಾಮಗಾರಿಗಳ ಅವಲೋಕನ
0
ಆಗಸ್ಟ್ 30, 2022
Tags