ತಿರುವನಂತಪುರ: ವಿಧಾನಸಭೆಯಲ್ಲಿ ಶಾಸಕಿ ಕೆ.ಕೆ.ಶೈಲಜಾ ಟೀಚರ್ ಅವರು ಆಡಿರುವ ಮಾತು ಇದೀಗ ಭಾರೀ ಚರ್ಚೆಗೊಳಗಾಗಿದ್ದು ಸಿಪಿಎಂಎ ಇರುಸುಮುರಿಸಿಗೆ ಕಾರಣವಾಗಲಿದೆ.
ಇಂದು ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ಕೆ.ಕೆ. ಶೈಲಜಾ ಮಾತನಾಡುತ್ತಿದ್ದಾಗ ಕೆ.ಟಿ.ಜಲೀಲ್ ಮಧ್ಯೆ ಪ್ರವೇಶಿಸಿದ್ದು ಈ ವೇಳೆ ಶೈಲಜಾ ಟೀಚರ್ ತಮ್ಮ ಆಸನದಲ್ಲಿ ಕುಳಿತು ತನ್ನಲ್ಲೇ ತಾನು “ಈತ ಇನ್ನೇನು ಇಕ್ಕಟ್ಟಿಗೆ ಸಿಲುಕುವನೋ” ಎಂದಿರುವುದು ಧ್ವನಿ ಕೇಳಿಬಂದಿದೆ. ಯಾಕೆಂದರೆ ಶೈಲಜಾ ಅವರು ತಮ್ಮ ಡೆಸ್ಕ್ ಮೈಕ್ ನ್ನು ಆಫ್ ಮಾಡದಿರುವುದರಿಂದ ಅವರ ಧ್ವನಿ ಇತರರಿಗೆ ಕೇಳಿಸಿಕೊಂಡಿದೆ
ಲೋಕಾಯುಕ್ತ ತಿದ್ದುಪಡಿ ಕಾಯ್ದೆ ಕುರಿತು ಸದನದ ಪರಿಗಣನೆ ನಡೆಯುತ್ತಿರುವಾಗಲೇ ಕೆ.ಕೆ.ಶೈಲಜಾ ಮಾತನಾಡುತ್ತಿದ್ದರು. ಅಷ್ಟರಲ್ಲಿ ಕೆ.ಟಿ.ಜಲೀಲ್ ಮಧ್ಯೆ ಪ್ರವೇಶಿಸಿದ್ದು, ಶೈಲಜಾ ಟೀಚರ್ ಅವರ ಸ್ವಗತ ಬಹಿರಂಗಗೊಂಡಿತು. ಈ ಹಿಂದೆ ಲೋಕಾಯುಕ್ತರ ಕ್ರಮದ ಹಿನ್ನೆಲೆಯಲ್ಲಿ ಹಿಂದಿನ ಸಚಿವ ಸಂಪುಟಕ್ಕೆ ಜಲೀಲ್ ರಾಜೀನಾಮೆ ನೀಡಿದ್ದರು..
ಬಳಿಕ ಸರಣಿ ವಿವಾದಗಳಿಂದ ಪಕ್ಷಕ್ಕೇ ಕಿರಿಕಿರಿ ಎನಿಸಿರುವ ಜಲೀಲ್ ಬಗ್ಗೆ ನುಂಗಲೂ-ಹೊರಗೆಡವಲೂ ಆಗದೆ ಸಿಪಿಎಂ ತೊಡಕಿನಲ್ಲಿರುವಾಗ ಶೈಲಜಾ ಅವರ ಸ್ವÀUತ ಮತ್ತೊಮ್ಮೆ ಅಲುಗಾಡಿಸಲಿದೆ ಎನ್ನಲಾಗಿದೆ.
“ಈತ ನಮ್ಮನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವನೋ ಏನೋ”: ವಿಧಾನಸಭೆಯಲ್ಲಿ ಜಲೀಲ್ ವಿರುದ್ಧ ಕೆ.ಕೆ.ಶೈಲಜಾ ಅವರ ಸ್ವಗತ ಬಹಿರಂಗ: ಸಿಪಿಎಂಗೆ ಇರಿಸುಮುರುಸು
0
ಆಗಸ್ಟ್ 23, 2022