HEALTH TIPS

ತ್ರಿವರ್ಣ ಧ್ವಜಾರೋಹಣ ಮಾಡುವಾಗ ಏನು ಮಾಡಬೇಕು? ಏನು ಮಾಡಬಾರದು?

ದೇಶದಾದ್ಯಂತ ಸ್ವಾತಂತ್ರ್ಯ ಅಮೃತ ಮಹೋತ್ಸವ ಮನೆ ಮಾಡಿದೆ. ಎಲ್ಲೆಂದರಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದ್ದು ಅಮೃತ ಮಹೋತ್ಸವ ಕಳೆಕಟ್ಟಿದೆ.

ದೇಶಪ್ರೇಮವನ್ನು ತೋರಿಸುವ ಉತ್ಸಾಹದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಾಗ ನಿಯಮಗಳನ್ನು ಪಾಲಿಸಬೇಕು. ರಾಷ್ಟ್ರಧ್ವಜಕ್ಕೆ ಅಗೌರವ, ಅಪಮಾನ ಆಗದಂತೆ ನೋಡಿಕೊಳ್ಳಬೇಕು.

ನಾವು ರಾಷ್ಟ್ರ ಧ್ವಜ ಹಾರಿಸುವಾಗ ಪಾಲಿಸಬೇಕಾದ ನಿಯಮಗಳು ಮತ್ತು ಏನನ್ನು ಮಾಡಬಾರದು ಎಂಬುದರ ಮಾಹಿತಿ ಇಲ್ಲಿದೆ.

ಧ್ವಜ ಹಾರಿಸುವಾಗ ಏನು ಮಾಡಬೇಕು? ಏನು ಮಾಡಬಾರದು..

* ಧ್ವಜ ಸಂಹಿತೆಗನುಸಾರ, ರಾಷ್ಟ್ರೀಯ ಧ್ವಜವನ್ನು ಹಾರಿಸಿದಾಗ ಅದಕ್ಕೆ ಸನ್ಮಾನ ಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಬೇಕು. ಅದು ಎಲ್ಲರಿಗೂ ಕಾಣಿಸುವ ರೀತಿ ಸ್ಥಳವನ್ನು ಆಯ್ಕೆಮಾಡಿಕೊಂಡು ಅಲ್ಲಿ ಧ್ವಜವನ್ನು ಏರಿಸಬೇಕು.

* ಪಾಲಿಸ್ಟರ್ ಧ್ವಜಗಳ ತಯಾರಿಕೆ ಮತ್ತು ಬಳಕೆ

* ಧ್ವಜವನ್ನು ಹಗಲು, ರಾತ್ರಿ ಹಾರಿಸಲು ಅನುಮತಿ

* ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಬೇಕು ಮತ್ತು ಗೌರವದಿಂದ ಕೆಳಗಿಳಿಸಬೇಕು.

* ಕಟ್ಟಡದ ಕಿಟಕಿ, ಬಾಲ್ಕನಿ, ಮನೆ ಮೇಲೆ ಅಥವಾ ಅಡ್ಡವಾಗಿ ಹಾರಿಸುವಾಗ ಧ್ವಜದಲ್ಲಿರುವ ಕೇಸರಿ ಬಣ್ಣದ ಪಟ್ಟಿಯು ಮೇಲಿರಬೇಕು.

* ಧ್ವಜಾರೋಹಣ ಮಾಡಿದವರು ಧ್ವಜಸ್ತಂಭದ ಬಲಭಾಗದಲ್ಲಿ ಸಭಿಕರ ಕಡೆಗೆ ಮುಖಮಾಡಿ ನಿಲ್ಲಬೇಕು.

* ಯಾವುದೇ ಮೆರವಣಿಗೆಯ ವೇಳೆ ಅಥವಾ ಪರೇಡಿನ ವೇಳೆ ವ್ಯಕ್ತಿಯ ಬಲಗೈಯಲ್ಲಿ ಧ್ವಜ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜವು ಮಧ್ಯದಲ್ಲಿರಬೇಕು.

*ಇತರ ಧ್ವಜ ಹಾಗೂ ಪತಾಕೆಗಳನ್ನು ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಹಾರಿಸಬಾರದು. ಬೇರೆ ದೇಶದ ಧ್ವಜಗಳಿದ್ದರೆ ಅವು ದೇಶದ ಧ್ವಜದ ಎಡಭಾಗದಲ್ಲೇ ಇರಬೇಕು.

* ಹರಿದ, ಮುದ್ದೆಯಾದ ಧ್ವಜದ ಆರೋಹಣ ಮಾಡುವಂತಿಲ್ಲ, ಪ್ರದರ್ಶಿಸುವಂತಿಲ್ಲ ಅಲ್ಲದೇ ಅದನ್ನು ಸುಡುವಂತಿಲ್ಲ.

* ಬಲವಂತವಾಗಿ ಧ್ವಜಕ್ಕೆ ಮಣ್ಣು ಹಾಗೂ ನೀರಿನ ಸ್ಪರ್ಶವಾಗಬಾರದು.

*ವಾಹನದ ಮೇಲೆ ಧ್ವಜವನ್ನು ಹಾರಿಸುವಾಗ ವಾಹನದ ಬ್ಯಾನೆಟಿನ ಮೇಲೆ ಧ್ವಜವನ್ನು ಹಾರಿಸಬೇಕು

*ಕೇಸರಿ ಪಟ್ಟಿಯು ಕೆಳಗೆ ಬರುವಂತೆ ಧ್ವಜಾರೋಹಣ ಮಾಡಬಾರದು. ಧ್ವಜಾರೋಹಣ ಮಾಡುವಾಗ ಹರಿಯದಂತೆ ಕಟ್ಟಬೇಕು.

*ಧ್ವಜವನ್ನು ಅಲಂಕಾರಕ್ಕಾಗಿ, ಮನೆಯ ಪರದೆಗಾಗಿ ಉಪಯೋಗಿಸಬಾರದು.

* ಧ್ವಜದ ಮೇಲೆ ಯಾವುದೇ ಬರವಣಿಗೆ, ಜಾಹೀರಾತು ಇರಬಾರದು. ಅಂತೆಯೇ ಧ್ವಜಸ್ತಂಭದ ಮೇಲೆಯೂ ಯಾವುದೇ ಜಾಹೀರಾತು ಹಾಕಬಾರದು.

* ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಧ್ವಜದಲ್ಲಿ ಹೂವು, ಹೂವಿನ ಎಸಳನ್ನು ಕಟ್ಟಿ ಧ್ವಜಾರೋಹಣವನ್ನು ಮಾಡಬೇಕು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries