ಕೊಚ್ಚಿ: ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನೆಗೊಳಗಾದ ಗ್ರಾಹಕರು/ಹೂಡಿಕೆದಾರರಿಗೆ ಮೊತ್ತವನ್ನು ಸರ್ಕಾರವೇ ಮರುಪಾವತಿ ಮಾಡುವುದಾಗಿ ಘೋಷಿಸಿದೆ.
ಕೇರಳ ಬ್ಯಾಂಕ್ ಸೇರಿದಂತೆ ಸಾಲ ಪಡೆದು ಹೂಡಿಕೆದಾರರಿಗೆ ಮೊತ್ತ ವಾಪಸ್ ನೀಡುವುದಾಗಿ ಹೈಕೋರ್ಟ್ ನಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.
ಹೂಡಿಕೆದಾರರಿಗೆ ಮೊತ್ತವನ್ನು ಹಿಂದಿರುಗಿಸುವ ನಿಖರವಾದ ಕಾರ್ಯವಿಧಾನದ ಬಗ್ಗೆ ನ್ಯಾಯಾಲಯವು ಸರ್ಕಾರವನ್ನು ಕೇಳಿದೆ. ಸಹಕಾರಿ ಸಚಿವರ ನೇತೃತ್ವದ ಉನ್ನತಾಧಿಕಾರ ಸಮಿತಿಯು ಸಮಸ್ಯೆ ಬಗೆಹರಿಸುವ ಮಾರ್ಗೋಪಾಯಗಳನ್ನು ಚರ್ಚಿಸಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ಬ್ಯಾಂಕ್‍ನ ಆಸ್ತಿಯನ್ನು ಒತ್ತೆ ಇಟ್ಟು ಕೇರಳ ಬ್ಯಾಂಕ್‍ನಿಂದ 25 ಕೋಟಿ ಸಾಲ ಪಡೆಯುವ ಸನ್ನದ್ದತೆ ಸರ್ಕಾರದ್ದೆದು ತಿಳಿದುಬಂದಿದೆ. ಅಲ್ಲದೆ ಬೇರೆ ಬ್ಯಾಂಕಿನಿಂದ ಸಾಲ ಪಡೆದು ಒಟ್ಟು 50 ಕೋಟಿ ರೂ. ಒಟ್ಟುಮಾಡಲಾಗುವುದು. ಆದರೆ ಹೂಡಿಕೆದಾರರ ಮಧ್ಯೆ ಮಧ್ಯವರ್ತಿಗಳ ಕೈವಾಡದಿಂದ ತೊಂದರೆಯಾಗುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಠೇವಣಿ ಹಣವನ್ನು ಅಗತ್ಯವಿರುವವರಿಗೆ ಹಿಂದಿರುಗಿಸುವಾಗ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ತಿಳಿಸುವಂತೆ ನ್ಯಾಯಮೂರ್ತಿ ಟಿ.ಆರ್.ರವಿ ಸರ್ಕಾರಕ್ಕೆ ಸೂಚಿಸಿದರು.
ಈ ಮಧ್ಯೆ, ಪ್ರಕರಣದ ಆರೋಪಿಗಳ ಮನೆ ಮೇಲೆ ನಿನ್ನೆ ಬೆಳಗ್ಗೆ ಇಡಿ ದಾಳಿ ನಡೆಸಿತ್ತು. ಇಡಿ ಅಧಿಕಾರಿಗಳು ಏಕಕಾಲಕ್ಕೆ ಐವರು ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೊಚ್ಚಿಯಿಂದ ತನಿಖಾಧಿಕಾರಿಗಳು ಪ್ರಮುಖ ಆರೋಪಿಗಳಾದ ಬಿಜೋಯ್, ಸುನೀಲ್ ಕುಮಾರ್, ಬಿಜು ಕರೀಂ ಮತ್ತು ಜಿಲ್ಸ್ ಅವರ ಮನೆಗಳನ್ನು ತಲುಪಿದ್ದರು. ಇಲ್ಲಿ ದಾಳಿ ಮುಂದುವರಿದಿದೆ ಎಂದು ವರದಿಯಾಗಿದೆ.
ಕರುವನ್ನೂರ್ ಬ್ಯಾಂಕಿನಲ್ಲಿ ಠೇವಣಿ ಇಟ್ಟವರಿಗೆ ಸರ್ಕಾರದಿಂದ ಮರುಪಾವತಿ; ಹೈಕೋರ್ಟ್ ನಲ್ಲಿ ಸರ್ಕಾರ ಹೇಳಿಕೆ
0
ಆಗಸ್ಟ್ 11, 2022
Tags