ಕಾಸರಗೋಡು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ ಕುಟುಂಬಶ್ರೀ ತಯಾರಿಸಿದ ರಾಷ್ಟ್ರಧ್ವಜಗಳ ವಿತರಣಾ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ನಿರ್ವಹಿಸಿದರು.
ಜಿಲ್ಲಾಧಿಕಾರಿಗಳ ಚೇಂಬರ್‍ನಲ್ಲಿ ನಡೆದ ಸಮಾರಂಭದಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ಕೋಸಂಯೋಜಕ ಟಿ.ಟಿ.ಸುರೇಂದ್ರನ್ ಅವರು ರಾಷ್ಟ್ರಧ್ವಜವನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಜಿಲ್ಲೆಯ ಕುಟುಂಬಶ್ರೀ ಘಟಕಗಳಿಂದ ಒಂದೂವರೆ ಲಕ್ಷ ರಾಷ್ಟ್ರಧ್ವಜಗಳನ್ನು ತಯಾರಿಸಲಾಗಿದೆ. 152 ಕುಟುಂಬಶ್ರೀ ಘಟಕಗಳು ರಾಷ್ಟ್ರಧ್ವಜ ತಯಾರಿಯ ಉಸ್ತುವಾರಿ ವಹಿಸಿದ್ದವು. ಧ್ವಜಗಳನ್ನು ಸ್ಥಳೀಯಾಡಳಿತ ಸಂಸ್ಥೆಗಳಿಂದ ಶಾಲೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಎಲ್ಲಾ ಧ್ವಜಗಳನ್ನು ವಿತರಿಸಲಾಗುವುದು. ಪಾಲಿಯೆಸ್ಟರ್ ಮತ್ತು ಹತ್ತಿ ಬಟ್ಟೆಗಳಲ್ಲಿ 20 ಸೆಂ.ಮೀ ಅಗಲ ಮತ್ತು ಮೂವತ್ತು ಸೆಂಟಿಮೀಟರ್ ಉದ್ದದಲ್ಲಿ ಧ್ವಜ ತಯಾರಿಸಲಾಗುತ್ತದೆ. ಪಾಲಿಯೆಸ್ಟರ್ ಧ್ವಜಕ್ಕೆ 30 ರೂ., ಹತ್ತಿ ಧ್ವಜಕ್ಕೆ 40 ರೂ. ಬೆಲೆ ನಿಗದಿಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜೇಸನ್ ಮ್ಯಾಥ್ಯೂ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕುಟುಂಬಶ್ರೀ ಸಹಾಯಕ.ಜಿಲ್ಲಾ ಮಿಷನ್ ಸಂಯೋಜಕ ಪ್ರಕಾಶನ್ ಪಾಳಾಯಿ, ಕುಟುಂಬಶ್ರೀ ಡಿಪಿಎಂ ತಾಟಿಲೇಶ್ ತ್ಯಾಂಪನ್, ಕೆ.ವಿ.ನಿದಿಶಾ, ಶೀಬಾ ನಾಯರ್ ಮತ್ತಿತರರು ಉಪಸ್ಥಿತರಿದ್ದರು.
ಹರ್ ಘರ್ ತಿರಂಗ: ಕುಟುಂಬಶ್ರೀಯಿಂದ ಒಂದೂವರೆ ಲಕ್ಷ ರಾಷ್ಟ್ರಧ್ವಜ ತಯಾರಿ
0
ಆಗಸ್ಟ್ 11, 2022
Tags