ಕಾಸರಗೋಡು: ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಸಂದರ್ಭ ದೇಶದ ನಾನಾ ಕಡೆ ಭಯೋತ್ಪಾದನಾ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾದ್ಯಂತ ಪೊಲೀಸರು ತಪಾಸಣಾ ಕಾರ್ಯ ಚುರುಕುಗೊಳಿಸಿದ್ದಾರೆ. ಎಲ್ಲ ರೈಲು ನಿಲ್ದಾಣ, ಜನದಟ್ಟಣೆಯಿರುವ ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಪೊಲೀಸ್, ಶ್ವಾನದಳ ಹಾಗೂ ಬಾಂಬ್ ದಳಗಳು ತಪಾಸಣೆ ನಡೆಸುತ್ತಿದೆ.
ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್‍ಪಿಎಫ್), ರೈಲ್ವೆ ಪೊಲೀಸರೂ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಪೊಲೀಸ್ ಶ್ವಾನದಳ ಕೆ-9 ಸ್ಕ್ವೇಡ್‍ನ ಚಾರ್ಲಿ ಹಾಗೂ ಬಡ್ಡಿ ಹೆಸರಿನ ಎರಡು ಶ್ವಾನಗಳು ತಪಾಸಣೆ ನಡೆಸುತ್ತಿದೆ. ನಿಲ್ದಾಣಕ್ಕೆ ಆಗಮಿಸುವ ರೈಲುಗಳು, ಸಾಮಾನು ಸರಂಜಾಮುಗಳು, ಬ್ಯಾಗೇಜ್‍ಗಳನ್ನೂ ತಪಾಸಣೆ ನಡೆಸುವುದರ ಜತೆಗೆ ಅಪರಿಚಿತ ವ್ಯಕ್ತಿಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ. ಸ್ವಾತಂತ್ರ್ಯೋತ್ಸವ ಸಮಾರಂಭ ಸಮಾಪ್ತಿಗೊಳ್ಳುವ ವರೆಗೂ ತಪಾಸಣೆ ಮುಂದುವರಿಯಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕರಾವಳಿ ಪ್ರದೇಶದಲ್ಲೂ ತಪಾಸಣೆ ಚುರುಕುಗೊಳಿಸಲಾಗಿದೆ.
ಸ್ವಾತಂತ್ರ್ಯೋತ್ಸವ ಹಿನ್ನೆಲೆ: ಕಾಸರಗೋಡಿನಲ್ಲಿ ಚುರುಕುಗೊಂಡ ತಪಾಸಣೆ
0
ಆಗಸ್ಟ್ 10, 2022
Tags