ಮುಳ್ಳೇರಿಯ: ಕಾರಡ್ಕ ಬ್ಲಾಕ್ ಆರೋಗ್ಯ ಮೇಳ ಶನಿವಾರ ಸಂಪನ್ನಗೊಂಡಿತು. ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಬೋವಿಕ್ಕಾನ ಸೌಪರ್ಣಿಕಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರದ ವಿವಿಧ ಆರೋಗ್ಯ ಸೇವೆಗಳು ಮತ್ತು ಆರೋಗ್ಯ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಂಚಾಯತಿ ಮತ್ತು ಆರೋಗ್ಯ ಕೇರಳದ ಆಶ್ರಯದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿತ್ತು. ನೂರಾರು ಮಂದಿ ಭಾಗವಹಿಸಿದ್ದರು.
ವರ್ಣರಂಜಿತ ಜಾಗೃತಿ ಮೆರವಣಿಗೆಯೊಂದಿಗೆ ಆರೋಗ್ಯ ಮೇಳ ಪ್ರಾರಂಭವಾಯಿತು. ನಂತರ ಆರೋಗ್ಯ ಕ್ಷೇತ್ರದ ಸೇವೆಗಳ ಕುರಿತು ಆರೋಗ್ಯ ವಿಚಾರ ಸಂಕಿರಣಗಳನ್ನು ನಡೆಸಲಾಯಿತು. ಏಳು ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರು, ಕುಟುಂಬಶ್ರೀ ಹಾಗೂ ಆಶಾ ಕಾರ್ಯಕರ್ತೆಯರು ಕಲಾ ಪ್ರದರ್ಶನ ನೀಡಿದರು. ಬೋವಿಕ್ಕಾನ ಸೌಪರ್ಣಿಕಾ ಆಡಿಟೋರಿಯಂ ಬಳಿ ಆಯೋಜಿಸಿದ್ದ ವಸ್ತು ಪ್ರದರ್ಶನ ಮಳಿಗೆಗಳನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಅಲೋಪತಿ, ಆಯುರ್ವೇದ ಹೋಮಿಯೋ, ಕುಟುಂಬಶ್ರೀ, ಸಾರ್ವಜನಿಕ ವಾರ್ತಾ ಇಲಾಖೆ, ಅಬಕಾರಿ ಇಲಾಖೆ, ಅಕ್ಕರ ಫೌಂಡೇಶನ್, ವಿಮೆ, ಯುಡಿಐಡಿ, ಐಸಿಟಿಸಿ ಸೊಸೈಟಿ ಸೆಕ್ಯುರಿಟಿ ಮಿಷನ್ ಹೀಗೆ ವಿವಿಧ ಇಲಾಖೆಗಳ ಸುಮಾರು 22 ಮಳಿಗೆಗಳು ಮೇಳದಲ್ಲಿ ಪ್ರದರ್ಶನ ನೀಡಿದ್ದವು.
ಮೇಳದ ಪ್ರಯುಕ್ತ ಆಗಸ್ಟ್ 7 ರಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆ, ಜೀವನಶೈಲಿ ರೋಗನಿರ್ಣಯ ಶಿಬಿರಗಳು, ಫ್ಲಾಶ್ ಮಾಬ್ ಇತ್ಯಾದಿಗಳನ್ನು ಆಯೋಜಿಸಲಾಗಿತ್ತು. ಸಮಾರೋಪದಲ್ಲಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಡಿಎಂಒಎವಿ ರಾಮದಾಸ್, ಕಾರಡ್ಕ ಆಯುμï ಪಿಎಚ್‍ಸಿ ವೈದ್ಯಾಧಿಕಾರಿ ಸ್ಮಿತಾ ರಾಜನ್, ಉಪಾಧ್ಯಕ್ಷೆ ಕೆ.ರಮಣಿ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಪಿ.ವಿ.ಮಿನಿ, ಎಚ್.ಮುರಳಿ, ಎ.ಪಿ.ಉμÁ, ಎಂ.ಧನ್ಯ, ಹಮೀದ್ ಪೊಸವಳಿಕೆ ಮೊದಲಾದವರಿದ್ದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಅಭಿವೃದ್ಧಿ ಅಧ್ಯಕ್ಷೆ ಎಸ್.ಎನ್.ಸರಿತಾ, ಮುಳಿಯಾರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಜನಾರ್ದನನ್, ಕಾರಡ್ಕ ಬ್ಲಾಕ್ ಪಂಚಾಯಿತಿ ಆರೋಗ್ಯ ಅಭಿವೃದ್ಧಿ ಅಧ್ಯಕ್ಷೆ ವಿ.ಸವಿತಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್, ಬ್ಲಾಕ್ ಸದಸ್ಯ ಎಂ.ಕುಂಞಂಬು ನಂಬಿಯಾರ್, ಬ್ಲಾಕ್ ಸದಸ್ಯೆ ಎಂ.ನಳಿನಿ, ವಸಂತಿ ಗೋಪಾಲನ್, ಚನಿಯ ನಾಯಕ್, ಸಾವಿತ್ರಿ ಬಾಲನ್, ಬಿ.ಕೃಷ್ಣನ್, ಮುಳಿಯಾರ್ ಗ್ರಾಮ ಪಂಚಾಯಿತಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿಸಾ ಮನ್ಸೂರ್, ಮುಳಿಯಾರ್ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಅನನ್ಯ, ಅಬ್ಬಾಸ್ ಕೊಳಚಪ್ಪು, ಮುಳಿಯಾರ್ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇ.ಮೋಹನನ್, ರೈಸಾ ರಶೀದ್, ವಿವಿಧ ಪಕ್ಷಗಳ ಮುಖಂಡರಾದ ಎಂ.ಮಾಧವನ್, ಅಶೋಕ್ ಕುಮಾರ್, ಕೆ.ಪಿ.ಮುಹಮ್ಮದ್ ಕುಂಞÂ್ಞ, ಕೆ.ಕುಂಞÂ್ಞ ರಾಮನ್, ವೈದ್ಯಾಧಿಕಾರಿ ಡಾ.ಶಮೀಮಾ ತನ್ವೀರ್, ವೈದ್ಯಾಧಿಕಾರಿ ಅಂಕು ರಾಮಚಂದ್ರನ್, ಮುಳಿಯಾರ್ ಸಿ.ಎಚ್. ಸಿ ಆರೋಗ್ಯ ಮೇಲ್ವಿಚಾರಕ ಪಿ ಕುಂಞÂ್ಞ ಕೃಷ್ಣನ್ ನಾಯರ್ ಮತ್ತು ಮುಳಿಯಾರ್ ಸಿಎಚ್‍ಸಿ ಎಚ್‍ಸಿ ಅಶೋಕ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.