ನವದೆಹಲಿ: ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಬಾಲಿವುಡ್ ನಟರಿಗೆ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ.
ರಾಮ್ ಸೇತು ಸಿನಿಮಾದಲ್ಲಿರುವ ಅಕ್ಷಯ್ ಕುಮಾರ್, ಜಾಕ್ವಲೀನ್ ಫರ್ನಾಂಡೀಸ್ ಹಾಗೂ ಇತರರಿಗೆ ಸ್ವಾಮಿ ಈ ನೊಟೀಸ್ ಜಾರಿಗೊಳಿಸಿದ್ದು, ಮುಂಬೈ ಸಿನಿಮಾ ವಾಲಾಗಳಿಗೆ ಸುಳ್ಳು ಮತ್ತು ದುರ್ಬಳಕೆಯ ಕೆಟ್ಟ ಅಭ್ಯಾಸವಿದೆ.ಆದ್ದರಿಂದ ಅವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ತಿಳಿಸುವುದಕ್ಕಾಗಿ ನಾನು ಸತ್ಯ ಸಭರ್ವಾಲ್ ಅಡ್ವೊಕೇಟ್ ಮೂಲಕ ಲೀಗಲ್ ನೊಟೀಸ್ ನ್ನು ರಾಮ ಸೇತು ಕಥೆಯನ್ನು ತಿರುಚಿದ ಅಕ್ಷಯ್ ಕುಮಾರ್ ಹಾಗೂ ಇನ್ನೂ 8 ಮಂದಿಗೆ ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.