ಕಾಸರಗೋಡು: ಪ್ರಸಿದ್ಧ ಮೃದಂಗ ವಾದಕ, ನೂರಾರು ಶಿಷ್ಯವೃಂದವನ್ನು ಬೆಳೆಸಿರುವ ಮೃದಂಗ ಗಾರುಡಿಗ ವಿದ್ವಾನ್ ಬಾಬು ರೈ ಅವರ ನೂರನೇ ಹುಟ್ಟುಹಬ್ಬ ಸಂಭ್ರಮ ಸಂದರ್ಭ ಕಸಾಪ ಕೇರಳ ಗಡಿನಾಡ ಘಟಕ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.
ವಿದ್ವಾನ್ ಬಾಬು ರೈ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅವರು ಶತಾಯುಷಿ, ವಿದ್ವಾನ್ ಬಾಬು ರೈ ಅವರನ್ನು ಶಾಲುಹೊದಿಸಿ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮೃದಂಗವಾದನದಲ್ಲಿ ಬಾಬು ರೈ ಅವರ ಕೈಚಳಕ, ಅಪಾರ ಅನುಭವ ಇವರನ್ನು ಓರ್ವ ಶ್ರೇಷ್ಠ ಕಲಾವಿದನನ್ನಾಗಿ ಬೆಳೆಸಿದೆ. ಸರಳತೆ, ಸಜ್ಜನ ನಡವಳಿಕೆಯಿಂದ ಬಾಬು ರೈ ಅವರು ಜನಮಾನಸದಲ್ಲಿ ತಮ್ಮ ಛಾಪು ಮೂಡಿಸಿರುವುದಲ್ಲದೆ ನೂರರ ಇಳಿವಯಸ್ಸಿನಲ್ಲೂ ಕಲೆಯೊಂದಿಗೆ ಅವರಿಗಿರುವ ನಂಟು ಸಮಾಜಕ್ಕೆ ಮಾದರಿಯಾಗಿರುವುದಾಗಿ ತಿಳಿಸಿದರು.
ಸಂಘಟನೆ ಗೌರವ ಕಾರ್ಯದರ್ಶಿ ಡಾ. ರಾಜಗೋಪಾಲ, ವಿಶೇಷ ಆಹ್ವಾನಿತರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ಸಂಗೀತ ವಿದ್ವಾನ್ ಸದಾಶಿವ ಆಚಾರ್ಯ ಕಲ್ಮಾಡಿ, ಸಂಗೀತ ವಿದುಷಿ ರಾಧಾ ಮುರಳೀಧರ, ನಿವೃತ್ತ ಮುಖ್ಯ ಶಿಕ್ಷಕಿ ಜಯಶೀಲಾ, ಸಮಿತಿಯ ಸದಸ್ಯ ದೇವದಾಸ್, ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ ಪ್ರಸಾದ್ ಪಾಲ್ಗೊಂಡರು.
ನೂರರ ಸಂಭ್ರಮದಲ್ಲಿ ಮೃದಂಗ ಗಾರುಡಿಗಗೆ ಕಸಾಪ ಅಭಿನಂದನೆ
0
ಆಗಸ್ಟ್ 24, 2022
Tags