ಕಾಸರಗೋಡು: ಬಿರುಸಿನ ಮಳೆಯಾಗುತ್ತಿರುವ ವೆಳ್ಳರಿಕುಂಡು ತಾಲೂಕಿನ ವಿವಿಧ ಕೇಂದ್ರಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದ್ದು, ಸಂತ್ರಸ್ತರ ಶಿಬಿರಕ್ಕೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಭಾನುವಾರ ಭೇಟಿ ನೀಡಿದರು.
ಶಿಬಿರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿನ ಸಂತ್ರಸ್ತರನ್ನು ಭೇಟಿ ಮಾಡಿ ಇವರಿಗೆ ಒದಗಿಸಿರುವ ಸವಲತ್ತುಗಳ ಬಗ್ಗೆ ಪರಾಮರ್ಶೆ ನಡೆಸಿದರು. ಭೂಕುಸಿತದ ನಂತರ ಮಲೆನಾಡು ಪ್ರದೇಶದಲ್ಲಿ ಹಾನಿಗೀಡಾಗಿರುವ ರಸ್ತೆಗಳನ್ನೂ ಜಿಲ್ಲಾಧಿಕಾರಿ ವೀಕ್ಷಿಸಿ ನಷ್ಟದ ಪ್ರಮಾಣ ಅಂದಾಜಿಸಿದರು. ರಸ್ತೆ ದುರಸ್ತಿ ಪೂರ್ಣಗೊಳಿಸಿ ಸಂಚಾರಯೋಗ್ಯಗೊಳಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ವಿ. ಮುರಳಿ, ಬಳಾಲ್ ಗ್ರಾ.ಪಂಪಿ.ಎಸ್. ಸುಜಿತ್ ಜಿಲ್ಲಾಧಿಕಾರಿ ಜತೆಗಿದ್ದರು.
ಸಂತ್ರಸ್ತರ ಶಿಬಿರಕ್ಕೆ ಜಿಲ್ಲಾಧಿಕಾರಿ ಭೇಟಿ
0
ಆಗಸ್ಟ್ 08, 2022