ತಿರುವನಂತಪುರ: ಕಮ್ಯುನಿಸ್ಟ್ ಸರ್ಕಾರದ ವಿರುದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಟೀಕಿಸಿದ್ದಾರೆ.
ಹಿಂದೂ ದೇವಾಲಯಗಳಲ್ಲಿ ಹಸ್ತಕ್ಷೇಪ ಮಾಡುವ ಸರ್ಕಾರದ ನಿಲುವನ್ನು ಇಂದು ಮಲ್ಹೋತ್ರಾ ಪ್ರಶ್ನಿಸಿದ್ದಾರೆ. ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಎದುರು ನಿಂತು ಎಡಪಕ್ಷಗಳ ಹಿಂದೂ ವಿರೋಧಿ ಧೋರಣೆಗಳನ್ನು ಮಾಜಿ ನ್ಯಾಯಮೂರ್ತಿಗಳು ಎತ್ತಿ ತೋರಿಸಿದ್ದಾರೆ.
ಹಿಂದೂ ದೇವಾಲಯಗಳನ್ನು ಕಮ್ಯುನಿಸ್ಟ್ ಸರ್ಕಾರಗಳು ಸ್ವಾಧೀನಪಡಿಸಿಕೊಂಡವು. ಶ್ರೀಪದ್ಮನಾಭಸ್ವಾಮಿ ದೇವಸ್ಥಾನದಲ್ಲೂ ಇದೇ ಪ್ರಯತ್ನ ನಡೆದಿದೆ. ಆದರೆ ನಾನು ಮತ್ತು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅದನ್ನು ತಡೆದೆವು ಎಂದು ಮಾಜಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹೇಳಿದ್ದಾರೆ. ಹಿಂದೂ ದೇವಾಲಯಗಳನ್ನು ಕಮ್ಯುನಿಸ್ಟ್ ಸರ್ಕಾರಗಳು ಆದಾಯದ ಆಸೆಯಿಂದ ವಶಪಡಿಸಿಕೊಳ್ಳುತ್ತಿವೆ ಎಂದು ಬಹಿರಂಗವಾಗಿ ಹೇಳಿದರು. ಇಂದು ಮಲ್ಹೋತ್ರಾ ಅವರನ್ನೊಳಗೊಂಡ ಪೀಠವು ಶಬರಿಮಲೆ ತೀರ್ಪು ನೀಡಿತ್ತು.
ಹಿಂದೂ ದೇವಾಲಯಗಳನ್ನು ಕಮ್ಯುನಿಸ್ಟ್ ಸರ್ಕಾರ ಆಕ್ರಮಿಸಿಕೊಂಡಿವೆ; ಆದಾಯದ ಮೇಲೆ ಕಣ್ಣು: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ
0
ಆಗಸ್ಟ್ 28, 2022
Tags