ಕಾಸರಗೋಡು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಸರಗೋಡು ಪಾಯಿಚ್ಚಾಲ್ ಋಷಿಕ್ಷೇತ್ರ ಚೈತನ್ಯ ವಿದ್ಯಾಲಯದ ನೇತೃತ್ವದಲ್ಲಿ ವಿದ್ಯಾಲಯದ ಆಸುಪಾಸಿನ ಶಾಲೆಗಳ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿಗೀತೆ ಮತ್ತು ರಾಷ್ಟ್ರಗೀತೆ ಹಾಡುವ ಸ್ಪರ್ಧೆ ನಡೆಯಿತು.
ಖ್ಯಾತ ಎಲುಬುರೋಗ ತಜ್ಞರಾದ ಡಾ. ನಾಗರಾಜ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾಲಯದ ಪ್ರಬಂಧಕ ನಾಗೇಶ್ ಬಿ ಅಧ್ಯಕ್ಷತೆ ವಹಿಸಿದರು. ಚೈತನ್ಯ ಟ್ರಸ್ಟ್‍ನಕಾರ್ಯದರ್ಶಿ ಮೊಹನ ಯಂ, ಟ್ರಸ್ಟಿಗಳಾದ ಮಾಧವ ಭಟ್, ಮನೋಜ್ ಪಿ, ಡಾ. ಜಯಶ್ರೀ ನಾಗರಾಜ್ ಭಟ್ ಹಾಗೂ ವಿದ್ಯಾಲಯದ ಪ್ರಭಾರ ಪ್ರಾಂಶುಪಾಲೆ ಪುಷ್ಪಲತ ಎಸ್ ಯಂ, ಮುಖ್ಯೋಪಾಧ್ಯಾಯನಿ ಹೇಮವತಿ ಆಚಾರ್ಯ, ಶಿಶುವಿಹಾರಮುಖ್ಯಸ್ಥೆ ರೂಪ ಕೆ ಪಿ ಉಪಸ್ಥಿತರಿದ್ದರು. ಈ ಸಂದರ್ಭ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾಲಯ ಆಡಳಿತಾಧಿಕಾರಿ ಶ್ರೀ ರಮೇಶ ಕೆ ಸ್ವಾಗತಿಸಿದರು. ಕಾರ್ಯಕ್ರಮದಕನ್ವೀನರ್ ಪ್ರಿಯಂವದ ವಂದಿಸಿದರು.
ಆಜಾದಿಕ ಅಮೃತ್ ಮಹೋತ್ಸವ್: ದೇಶಭಕ್ತಿಗೀತೆ, ರಾಷ್ಟ್ರಗೀತೆ ಸ್ಪರ್ಧಾ ಕಾರ್ಯಕ್ರಮ
0
ಆಗಸ್ಟ್ 02, 2022
Tags