ಕುಂಬಳೆ: ಇಲಿ ಜ್ವರದಿಂದ ಉಂಟಾಗುವ ಮರಣ ಪ್ರಮಾಣ ತಡೆಯುವ ಗುರಿಯನ್ನಿಟ್ಟುಕೊಂಡು ಕುಂಬಳೆ ಸಿ ಎಚ್ ಸಿ(ಸಮುದಾಯ ಆರೋಗ್ಯ ಕೇಂದ್ರ) ನಿರ್ಮಿಸುವ "ಲಪೆÇ್ಟೀ," ಎಂಬ ಕಿರುಚಿತ್ರದ ಚಿತ್ರೀಕರಣವನ್ನು ಆರಂಭಿಸಲಾಗಿದೆ. ಸಿ ಎಚ್ ಸಿ ಯಲ್ಲಿ ಆರೋಗ್ಯಾಧಿಕಾರಿ ಡಾಕ್ಟರ್. ಕೆ ದಿವಾಕರ ರೈ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರ ನಿರ್ಮಾಣಕ್ಕೆ ಚಾಲನೆ ನೀಡಿದರು.
ಇಲಿ , ಅಳಿಲು , ದನ , ಆಡು ನಾಯಿ ಎಂಬಿವುಗಳ ಮಲ ಮೂತ್ರ ವಿಸರ್ಜನೆ ಗಳು ಬೆರೆತ ನೀರಿನ ಸಂಪರ್ಕ ದಿಂದ ಬರುವ ರೋಗವಾದ ಇಲಿ ಜ್ವರ ಚರ್ಮದಲ್ಲಿರುವ ಗಾಯ, ಕಣ್ಣು, ಮೂಗು, ಬಾಯಿ ಇವುಗಳ ಮುಖಾಂತರ ರೋಗಾಣುಗಳು ಮನುಷ್ಯನ ಶರೀರವನ್ನು ಪ್ರವೇಶಿಸುತ್ತದೆ. ಮಲಿನ ನೀರಿನ ಸಂಪರ್ಕದಲ್ಲಿರುವ ವ್ಯಕ್ತಿಗಳು ರಕ್ಷಣೆಗಾಗಿ ಕೈ ಕವಚ, ( ಗ್ಲೌಸ್) ಮೊಣ ಕಾಲಿನ ವರೆಗೆ ಇರುವ ಶೂ, ಮಾಸ್ಕ್ ಎಂಬಿವುಗಳನ್ನು ಉಪಯೋಗಿಸಬೇಕು ಎಂಬ ಸಂದೇಶವನ್ನು ಈ ಕಿರು ಚಿತ್ರವು ಸಾರಿ ಹೇಳಲಿದೆ.
ಇಲಿ ಜ್ವರದ ವಿರುದ್ಧ ಜನ ಜಾಗೃತಿ ಮೂಡಿಸಲು ಕುಂಬಳೆಯಲ್ಲಿ ಕಿರು ಚಿತ್ರ ತಯಾರಿ ಹಂತದಲ್ಲಿ
0
ಆಗಸ್ಟ್ 13, 2022