ತಿರುವನಂತಪುರಂ: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು 75 ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಅಮೃತ್ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿಶ್ವದಾದ್ಯಂತ ಇರುವ ಕೇರಳಿಗರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ದೇಶಭಕ್ತರನ್ನು ಗೌರವಿಸೋಣ ಎಂದರು. ರಾಜ್ಯಪಾಲರು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
"ಅತಿದೊಡ್ಡ ಪ್ರಜಾಪ್ರಭುತ್ವದ ನಾಗರಿಕರಾಗಿ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಪೋಷಿಸುವ ಮೂಲಕ ಮತ್ತು ಅತ್ಯುನ್ನತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಎಲ್ಲಾ ನಾಗರಿಕರಿಗೆ ಹೆಚ್ಚು ಗೌರವಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ" ಎಂದು ಅವರು ಹೇಳಿದರು.
"ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ದೇಶಭಕ್ತರನ್ನು ಗೌರವದಿಂದ ಸ್ಮರಿಸೋಣ. ಭಾರತೀಯರಾದ ನಮ್ಮ ಪ್ರತಿಯೊಂದು ಕಾರ್ಯವೂ ಸಮಗ್ರ ಉನ್ನತ ಪ್ರಗತಿ ಮತ್ತು ಸಂಪೂರ್ಣ ಸ್ವಾವಲಂಬನೆಯತ್ತ ಭಾರತದ ಅಮೃತ ಪಯಣಕ್ಕೆ ಶಕ್ತಿ ತುಂಬಲಿ" ಎಂದು ರಾಜ್ಯಪಾಲರು ಹಾರೈಸಿರುವರು.
ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ದೇಶಭಕ್ತರನ್ನು ಗೌರವದಿಂದ ಸ್ಮರಿಸೋಣ; ರಾಜ್ಯಪಾಲರಿದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಸಂದೇಶ
0
ಆಗಸ್ಟ್ 15, 2022
Tags