ಮಂಜೇಶ್ವರ: ವರ್ಕಾಡಿ ಬಾವಲಿಗುಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 8ನೇ ವರ್ಷದ ಗಣೇಶೋತ್ಸವ ಆ. 31 ರಂದು ಬುಧವಾರ ದಿನೇಶ್ ಕೃಷ್ಣ ತಂತ್ರಿ ಯವರ ನೇತೃತ್ವದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಪ್ರತಿಷ್ಠೆ, 8 ಕ್ಕೆ ಬೆಳಗಿನ ಪೂಜೆ, 9 ಕ್ಕೆ ದ್ವಾದಶ ನಾಳೀಕೇರ ಗಣಯಾಗ ಆರಂಭ, 10 ಕ್ಕೆ ಗಣಯಾಗ ಪೂರ್ಣಾಹುತಿ, 10:30ಕ್ಕೆ ಅಲಂಕಾರ ಪೂಜೆ, ಮಧ್ಯಾಹ್ನ 12:30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಮನೋರಂಜನ ಕಾರ್ಯಕ್ರಮ ಅಂಗವಾಗಿ ಬೆಳಿಗ್ಗೆ 9 ರಿಂದ 11ರವರೇಗೆ ಭಕ್ತಿ ಗೀತೆ ಕರುಣಾಕರ್(ವಿಶೇಷ ಗಾಯಕರು ) ಕೊಳತ್ತಮಜಲು, ಬೆಳಿಗ್ಗೆ 11 ರಿಂದ 1 ರ ತನಕ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ನಿರ್ಕೇರೆ ಮೂಡುಬಿದಿರೆ ಇವರಿಂದ ಕುಣಿತ ಭಜನೆ, ಮಧ್ಯಾಹ್ನ 1:30ರಿಂದ 3:30 ರ ವರೇಗೆ ಮಸ್ಕಿರಿ ಕುಡ್ಲ ತಂಡದವರಿಂದ “ತೆಲಿಕೆ ಬಂಜಿ ನಿಲಿP”É ಹಾಸ್ಯ ಕಾರ್ಯಕ್ರಮ ನಡೆಯಲಿರುವುದು. ಸಂಜೆ 4 ರಿಂದ ಗಣಪತಿ ಯಾತ್ರಾಪೂಜೆ, ಪ್ರಸಾಧ ವಿತರಣೆ, ಬಳಿಕ ಗಣೇಶನ ಶೋಭಾ ಯಾತ್ರೆಯು ಸ್ಥಬ್ದ ಚಿತ್ರ,ಸಿಂಗಾರಿ ಮೇಳ, ವಾದ್ಯ ಮೇಳ,ನಾಸಿಕ್ ಮೇಳ, ಅಲ್ಲದೆ ತಾಲೀಮು ಪ್ರದರ್ಶನದೊಂದಿಗೆ ವೈಭವದ ಮೆರವಣಿಗೆ ಯೊಂದಿಗೆ ಹೊರಟು ಸಾಂತಿವಳಿಕೆ ಕೆರೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಲಿದೆ.
ಬಾವಲಿಗುಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಾಳೆ
0
ಆಗಸ್ಟ್ 30, 2022