ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾವಿನಕಟ್ಟೆ-ಮಾಟ್ಟಂಗುಳಿ, ಕಂಟಂಗೇರಡ್ಕ ರಸ್ತೆಗೆ ಪತ್ರಕರ್ತ, ಸಂಘಟಕ ದಿ.ನಾಂಗಿ ಅಬ್ದುಲ್ಲ ಮಾಸ್ತರ್ ಅವರ ಹೆಸರಿರಿಸಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಬೇಕೆಂಬ ಆಗ್ರಹ ಮತ್ತೆ ಬಲಗೊಳ್ಳುತ್ತಿದೆ.
ನಾಂಗಿ ಮಾಸ್ತರ್ ಎಂದೇ ಖ್ಯಾತರಾದ ನಾಂಗಿ ಅಬ್ದುಲ್ಲ ಮಾಸ್ತರ್ ಅವರು ಕುಂಬಳೆಯ ಸರ್ವತೋಮುಖ ಅಭಿವೃದ್ಧಿಗೆ ಲೇಖನಿ ಹಿಡಿದು ಮಾಡಿದ ಹೋರಾಟಗಳು ಮಹತ್ತರವಾದುದು. ಪ್ರಮುಖ ಪತ್ರಕರ್ತರಾಗಿ, ಹಿರಿಯ ತಲೆಮಾರಿನ ಜನಾನುರಾಗಿಯಾಗಿದ್ದ ಸಜ್ಜನ ವ್ಯಕ್ತಿತ್ವದವರು. 2017ರಲ್ಲಿ ಕುಂಬಳೆ ಗ್ರಾಮ ಪಂಚಾಯಿತಿ ಈ ರಸ್ತೆಗೆ ನಾಂಗಿ ಮಾಸ್ತರರ ಹೆಸರಿಡಲು ಠರಾವು ಪಾಸು ಮಾಡಿತ್ತು. ಆದರೆ ಐದು ವರ್ಷ ಕಳೆದರೂ ಪಂಚಾಯಿತಿ ಅನುμÁ್ಠನಕ್ಕೆ ಮುಂದಾಗದಿರುವುದು ಭಾರಿ ಟೀಕೆಗೆ ಕಾರಣವಾಗಿದೆ. ನಾಂಕಿ ಅಬ್ದುಲ್ಲ ಮಾಸ್ತರ್ ಅವರು ಪತ್ರಕರ್ತರಾಗಿದ್ದು, ಸಮಾಜದ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಸುದ್ದಿಗಳನ್ನು ಸಿದ್ಧಪಡಿಸಿ ಅದನ್ನು ಅಧಿಕಾರಿಗಳ ಮುಂದೆ ತರಲು ಹೆಚ್ಚಿನ ಆಸಕ್ತಿಯನ್ನು ತೋರಿಸಿದರು. ಮಾಸ್ತರರ ಹೆಸರನ್ನು ರಸ್ತೆಗಿರಿಸುವ ಮೂಲಕ ಪತ್ರಕರ್ತನೋರ್ವನ ಸಾಮಾಜಿಕ ಬದ್ದತೆಯನ್ನು ಹೊಸ ತಲೆಮಾರಿಗೂ ಪರಿಚಯಿಸಲು ಸಾಧ್ಯವಿದ್ದು ಸಂಬಂಧಪಟ್ಟವರು ಶೀಘ್ರ ಅನುಷ್ಠಾನಗೊಳಿಸಬೇಕೆಂದು ಕುಂಬಳೆಯ ನಾಗರಿಕರು ಆಗ್ರಹಿಸಿದ್ದಾರೆ.
ಮಾವಿನಕಟ್ಟೆ-ಮಾಟಂಗುಳಿ-ಕುಂಟಂಗೇರಡ್ಕ ರಸ್ತೆಗೆ ಪತ್ರಕರ್ತ ದಿ.ನಾಂಗಿ ಮಾಸ್ತರರ ಹೆಸರಿರಿಸಬೇಕೆಂಬ ವರ್ಷಗಳ ಬೇಡಿಕೆಗೆ ಮತ್ತೆ ಜೀವ
0
ಆಗಸ್ಟ್ 10, 2022