ತಿರುವನಂತಪುರ: ಡ್ರೈವಿಂಗ್ ಲೈಸೆನ್ಸ್ ಪಡೆಯುವಲ್ಲಿ ಮಹಿಳೆಯರು ಪುರುಷಗಿಂತ ಮುಂದಿದ್ದಾರೆ. ರಾಜ್ಯದ ಐದು ವರ್ಷಗಳ ಅಂಕಿಅಂಶಗಳ ಪ್ರಕಾರ, ವಾರ್ಷಿಕವಾಗಿ ಪುರುಷರಿಗಿಂತ ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರು ಪರವಾನಗಿ ಪಡೆಯುತ್ತಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 31.91 ಲಕ್ಷ ಮಹಿಳೆಯರು ಪರವಾನಗಿ ಪಡೆದಿದ್ದಾರೆ. 21.90 ಲಕ್ಷ ಪುರುಷರಿಗೂ ಪರವಾನಗಿ ನೀಡಲಾಗಿದೆ. ಆರ್ ಟಿಐ ಅಡಿಯಲ್ಲಿ ಮೋಟಾರು ಇಲಾಖೆ ನೀಡಿರುವ ಅಂಕಿಅಂಶಗಳಿವು.
2017-2018 ರಿಂದ, ಪ್ರತಿ ವರ್ಷ 9 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು 6 ಲಕ್ಷ ಪುರುಷರು ಪರವಾನಗಿ ಪಡೆದಿದ್ದಾರೆ ಎಂದು ಅಂಕಿಅಂಶ ಸೂಚಿಸುತ್ತದೆ. ಆದರೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಆದರೂ ಪರವಾನಗಿ ಪಡೆದ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಮುಂದಿದೆ. ಕೊರೋನಾ ಕಾಲದಲ್ಲೂ 4.51 ಲಕ್ಷ ಮಹಿಳೆಯರು ಪರವಾನಗಿ ಪಡೆದಿದ್ದಾರೆ.
ಕೊರೋನಾ ಸಮಯದಲ್ಲಿ 3.31 ಲಕ್ಷ ಪುರುಷರು ಪರವಾನಗಿ ಪಡೆದಿದ್ದಾರೆ. ಐದು ವರ್ಷಗಳಲ್ಲಿ 225 ಟ್ರಾನ್ಸ್‍ಜೆಂಡರ್‍ಗಳು ಪರವಾನಗಿ ಪಡೆದಿದ್ದಾರೆ. ಮೋಟಾರು ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಮಾರುಕಟ್ಟೆಗೆ ಸ್ವಯಂಚಾಲಿತ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಪ್ರವೇಶವು ಮಹಿಳೆಯರಿಗೆ ಚಾಲನೆ ಮಾಡಲು ಉತ್ತೇಜನ ನೀಡಿದೆ, ಆದ್ದರಿಂದ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದಿರುವರು.
ರಾಜ್ಯದಲ್ಲಿ ಪುರುಷರನ್ನು ಮೀರಿಸಿದ ಮಹಿಳೆಯರು; ಪರವಾನಗಿ ಪಡೆಯುವಲ್ಲೂ ಮುಂದು
0
ಆಗಸ್ಟ್ 18, 2022
Tags