HEALTH TIPS

ವಿದೇಶಿ ಹಣ್ಣು ಕೃಷಿಯ ಸ್ವರ್ಗ, ಲಾಭ ದ್ವಿಗುಣ: ಕೇರಳದ ಈ ಪ್ರದೇಶದಲ್ಲಿ ತೋಟಗಳನ್ನು ಖರೀದಿಸಲು ಮುಗಿಬೀಳುತ್ತಿರುವ ರೈತರು


          ತ್ರ್ರಿಶೂರ್: ಚಾಲಕುಡಿ ಪರಿಯಾರಂ ಪ್ರದೇಶದ  ರೈತರು ಸಾಂಪ್ರದಾಯಿಕ ಬಾಳೆ ಮತ್ತು ಇತರ ಸ್ಥಳೀಯ ಕೃಷಿಯಿಂದ ವಿದೇಶಿ ಹಣ್ಣಿನ ಕೃಷಿಗೆ ಬದಲಾಗುತ್ತಿದ್ದಾರೆ. ಇಂಡೋನೇμÁ್ಯ ಮತ್ತು ಮಲೇಷಿಯಾದ  ಮ್ಯಾಂಗೋಸ್ಟೀನ್ ಮತ್ತು ಬಾಂಬುಟಾನ್ ಕೃಷಿ ಹೆಚ್ಚು ಪ್ರಚಾರದಲ್ಲಿದೆ.
            ಇಲ್ಲಿಯವರೆಗೆ 100 ರಿಂದ 200 ಹೆಕ್ಟೇರ್‍ನಲ್ಲಿ ಬಾಳೆ ಮತ್ತು ತೆಂಗು ಬೆಳೆಯಲಾಗುತ್ತಿತ್ತು. ಆದರೆ ಕಳೆದ ಏಳು ವರ್ಷಗಳಲ್ಲಿ, ರಾಂಬುಟಾನ್ 100 ಹೆಕ್ಟೇರ್‍ಗೆ ಮತ್ತು ಮ್ಯಾಂಗೋಸ್ಟೀನ್ 70 ಹೆಕ್ಟೇರ್ ಗಳಷ್ಟು ಪ್ರದೇಶಗಳಲ್ಲಿ ಬೆಳೆಸಲಾಗಿದೆ. ರಫ್ತುದಾರರಿಗೂ ಎಕರೆಗಟ್ಟಲೆ ತೋಟಗಳಿವೆ.
           ಹಿತ್ತಲಿನಲ್ಲಿ ಹಣ್ಣುಗಳನ್ನು ಬೆಳೆಯುವ ಅನೇಕ ಜನರಿದ್ದಾರೆ. ಆವಕೊಡೊ ಮತ್ತು ಡ್ರ್ಯಾಗನ್  ಬೆಳೆಸಲು ಇದೀಗ ಹೆಚ್ಚು ಆಕರ್ಷಿತರಾಗುತ್ತಿರುವುದು ಕಂಡುಬಂದಿದೆ.  ಪರಿಯಾರಂನ 2,469 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಮೂರನೇ ಒಂದು ಭಾಗವು ಹಣ್ಣಿನ ಕೃಷಿಗೆ ಒಳಪಟ್ಟಿದೆ. ಇದನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ಕೂಡಾ ಯೋಜನೆ ರೂಪಿಸುತ್ತಿದೆ.
           ಉತ್ತಮ ಆದಾಯ, ಕಡಿಮೆ ವೆಚ್ಚ, ರಫ್ತು ಸಾಮಥ್ರ್ಯ ಮತ್ತು ಸಬ್ಸಿಡಿಗಳಿಂದ ರೈತರು ಆಕರ್ಷಿತರಾಗುತ್ತಾರೆ. ಸ್ಥಳೀಯ ಮಾರಾಟದ ಹೊರತಾಗಿ, ಕೊಚ್ಚಿ, ಆಲುವಾ ಮತ್ತು ಮಲಪ್ಪುರಂನ ಮಾರಾಟಗಾರರು ಸಹ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. ಇಡೀ ತೋಟವನ್ನು ಖರೀದಿಸುವವರೂ ಇದ್ದಾರೆ. ಅತಿರಪ್ಪಳ್ಳಿ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾರಾಟವೂ ನಡೆಯುತ್ತಿದೆ. ಸೂಪರ್ ಮಾರ್ಕೆಟ್ ಗಳಲ್ಲಿ ಉತ್ತಮ ಬೇಡಿಕೆ ಇದೆ. ಅಲ್ಲದೆ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಇಂದೋರ್ ಮತ್ತು ಪುಣೆಗೆ ರವಾನೆಯಾಗುತ್ತದೆ.
             ಋತುವು ಮೇ ಅಂತ್ಯದಿಂದ ಜುಲೈ ವರೆಗೆ ಇರುತ್ತದೆ. ವರ್ಷದಲ್ಲಿ ರಫ್ತು ಸೇರಿದಂತೆ ಸುಮಾರು 7.25 ಕೋಟಿ ವಹಿವಾಟು ನಡೆಸುತ್ತಿದೆ ಎಂದು ವರದಿಯಾಗಿದೆ. ಸುಮಾರು 400 ಸಣ್ಣ ಮತ್ತು ದೊಡ್ಡ ರೈತರಿದ್ದಾರೆ. ಸುಮಾರು 150 ಜನರು ಒಂದು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ದಾರೆ. ಲಾಭ ತಿಳಿದು ರೈತರು ಹಣ್ಣಿನ ಕೃಷಿಗೆ ಆಕರ್ಷಿತರಾಗುತ್ತಿರುವುದು ಲಾಭ ಗಳಿಕೆ ದೃಷ್ಟಿಯಿಂದ ಒಳ್ಳೆಯದಾದರೂ, ಸಾಂಪ್ರದಾಯಿಕ ಕೃಷಿ ಬೆಳೆಯ ಅವಸಾನಕ್ಕೂ ಕಾರಣವಾಗಲಿದೆ ಎಂಬುದೂ ಉಲ್ಲೇಖನೀಯ. ಸಣ್ಣದಾಗಿ ಆರಂಭಿಸಿ ಬಳಿಕ ವಿಸ್ತರಿಸುತ್ತಿರುವುದು ಕಂಡುಬರುತ್ತಿದೆ. . ಒಂದು ಹಂಗಾಮಿನಲ್ಲಿ ಅರ್ಧ ಎಕರೆಗೆ ಮೂರು ಲಕ್ಷ ರೂ. ಸಾಮಾನ್ಯ ಖರ್ಚು ಎಂದು ಸ್ಥಳೀಯ ರೈತರ ಲೆಕ್ಕಾಚಾರ.
ಮ್ಯಾಂಗೋಸ್ಟೀನ್:
ಆರನೇ ವರ್ಷದಿಂದ ಬೆಳೆ ಆರಂಭ.  10 ವರ್ಷದ ಮರದಿಂದ 100 ಕೆಜಿ ನಿರೀಕ್ಷಿಸಬಹುದು. 8 ದಿನ ಈ ಹಣ್ಣು ಹಾಳಾಗುವುದಿಲ್ಲ.
ರಾಂಬುಟಾನ್:
3 ವರ್ಷಗಳಲ್ಲಿ ಫಲ ನೀಡುತ್ತದೆ. 10 ವರ್ಷದ ಮರದಿಂದ 200 ಕೆಜಿ ನಿರೀಕ್ಷಿಸಬಹುದು. 3 ದಿನಗಳವರೆಗೆ ಹಾಳಾಗುವುದಿಲ್ಲ. ಮರಗಳು ವಯಸ್ಸಾದಂತೆ ಹಣ್ಣುಗಳು ಹೆಚ್ಚಾಗುತ್ತವೆ.
            ಋತುವಿನ ಆರಂಭದಲ್ಲಿ ಬೆಲೆ:
(ಪ್ರತಿ ಕೆಜಿಗೆ)
ಮ್ಯಾಂಗೋಸ್ಟೀನ್ - ರೂ.400 ವರೆಗೆ.
ರಾಂಬುಟಾನ್ - 300 ವರೆಗೆ.
ಸರಾಸರಿ ಬೆಲೆ:É
 (ಪ್ರತಿ ಕೆಜಿಗೆ)
ಮ್ಯಾಂಗೋಸ್ಟೀನ್ - 200.
ರಾಂಬುಟಾನ್ 160-175.
ಸಹಾಯಧನ:
(ಪ್ರತಿ ಹೆಕ್ಟೇರಿಗೆ)
ರಾಂಬುಟಾನ್, ಆವಕಾಡೊ, ಮ್ಯಾಂಗೋಸ್ಟೀನ್ - 18,000.
ಡ್ರ್ಯಾಗನ್ - 30,000ರೂ.
ರಾಂಬುಟಾನ್ ಬೆಲೆ - ರೂ.35,000



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries