ಕಾಸರಗೋಡು: 75 ನೇ ಸ್ವಾತಂತ್ರ್ಯೋತ್ಸವದ ಹರ್ ಗರ್ ತಿರಂಗಾ ಅಭಿಯಾನ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಛೇರಿಯಲ್ಲಿ ಕುಟುಂಬ ಶ್ರೀ ಜಿಲ್ಲಾ ಮಿಷನ್ ನೇತೃತ್ವ ದಲ್ಲಿ ಕಿಯೋಕ್ಸ್ ಪ್ರಾರಂಭಿಸಲಾಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್‍ಚಂದ್ ಕಾರ್ಯಕ್ರಮ ಉದ್ಘಾಟಿಸಿದರು. ಕುಟುಂಬಶ್ರೀ ಯ ಜಿಲ್ಲಾಮಿಷನ್ ಕೋರ್ಡಿನೇಟರ್ ಟಿ ಟಿ ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು.
ಬೇವಿಂಜ "ಮೇನಂ ಕೋಟನ್ ಬ್ಯಾಗ್ಸ್" ಸಂಸ್ಥೆ ಜಿಲ್ಲಾ ಕಛೇರಿಯಲ್ಲಿರುವ ಕಿಯೋಕ್ಸ್‍ಗೆ ಕುಟುಂಬಶ್ರೀ ನೇತೃತ್ವದಲ್ಲಿ ದ್ವಜಗಳನ್ನು ನಿರ್ಮಿಸಿ ನೀಡುತ್ತಿದ್ದು, ಜಿಲ್ಲಾ ಕಛೇರಿಯ ವಿವಿಧ ಕಚೇರಿಗಳಿಗೆ, ನೌಕರರ ಮನೆಗಳಿಗೆ ಅಗತ್ಯವಾದ ರಾಷ್ಟ್ರಧ್ವಜಗಳನ್ನು ಇಲ್ಲಿಂದ ವಿತರಿಸಲಾಗುತ್ತದೆ. ಮೊದಲ ದಿವಸ 200ದ್ವಜಗಳು ವಿತರಣೆಗಾಗಿ ತಲುಪಿದ್ದು, ಮುಂದಿನ ದಿನಗಳಲ್ಲಿ ಅವಶ್ಯಕತೆಗನುಸಾರವಾಗಿ ಹೆಚ್ಚಿನ ರಾಷ್ಟ್ರ ದ್ವಜಗಳನ್ನು ಪೂರೈಸಲಾಗುವುದು. ಆಗಸ್ಟ್ 13ರ ತನಕ ದ್ವಜಗಳು ಲಭ್ಯವಿದ್ದು, 3:2 ಎಂಬ ಅನುಪಾತದಲ್ಲಿ ನಿರ್ಮಿಸಿದ ರಾಷ್ಟ್ರ ದ್ವಜಗಳಿಗೆ 30 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಕುಟುಂಬಶ್ರೀ ಜಿಲ್ಲಾ ಮಿಶನ್ ಸಹಾಯಕ ಕೊ ಆರ್ಡಿನೇಟರ್ ಪ್ರಕಾಶನ್ ಪಲಾಯಿ, ಕುಟುಂಬಶ್ರೀ ಡಿ ಪಿ ಎಂ ಗಳಾದ ಕೆ ನಿದಿಷ , ಶೀಬಾ ನಾಯರ್ ಉಪಸ್ಥಿತರಿದ್ದರು.
ಹರ್ ಘರ್ ತಿರಂಗಾ ಜಿಲ್ಲಾಧಿಕಾರಿ ಕಛೇರಿಯಲ್ಲಿ ಕುಟುಂಬಶ್ರೀ ಕಿಯೋಕ್ಸ್ ಪ್ರಾರಂಭ
0
ಆಗಸ್ಟ್ 12, 2022
Tags