: ಸರಕಾರದ ಓಣಂ ಕಿಟ್‍ನಲ್ಲಿ ಗೋಡಂಬಿ(ಗೇರುಬೀಜ) ವಿಐಪಿ ಖಾದ್ಯವಾಗಿದೆ. ಈ ಬಾರಿ ಐವತ್ತು ಗ್ರಾಂನ 80 ಲಕ್ಷ ಪ್ಯಾಕೆಟ್‍ಗಳಲ್ಲಿ 400 ಟನ್ ಗೇರುಬೀಜ ಬೇಕಾಗಿ ಬರಲಿದೆ.
ಗೋಡಂಬಿ ಅಭಿವೃದ್ಧಿ ನಿಗಮ ಮತ್ತು ಸಿ.ಎ.ಪಿ.ಇ.ಎಕ್ಸ್ ಸೇರಿ ಇಷ್ಟು ಮೊತ್ತವನ್ನು ತಲುಪಿಸಲು ಶ್ರಮಿಸುತ್ತಿವೆ. ಎರಡೂ ಸಂಸ್ಥೆಗಳು 40 ಕೋಟಿ ವಹಿವಾಟು ನಡೆಸಲಿವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗ್ರೇಡ್ ಒನ್ ಗೋಡಂಬಿಗೆ ಬೆಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಲೆ ಕಡಿಮೆ ಇರುವ ಗ್ರೇಡ್ 2 ದೇಶೀಯ ಗೋಡಂಬಿ ಬಳಸಲಾಗುತ್ತಿದ್ದು, ಉದ್ಯಮಕ್ಕೆ ಈ ನಿರ್ಧಾರ ದೊಡ್ಡ ಸಮಾಧಾನ ತಂದಿದೆ.
ಸರ್ಕಾರದ ನಿರ್ಧಾರದ ನಂತರ, ಸಪ್ಲೈಕೋ ಉನ್ನತ ಅಧಿಕಾರಿಗಳು ಕೊಲ್ಲಂನಲ್ಲಿರುವ ಕ್ಯಾಶ್ಯೂ ಕಾಪೆರ್Çರೇಶನ್‍ನ ಕಾರ್ಖಾನೆಗೆ ಭೇಟಿ ನೀಡಿದರು. ಪ್ಯಾಕಿಂಗ್ ಕೆಲಸ ಆರಂಭವಾಗಿದೆ. ಮಂಗಳವಾರ ವಿವಿಧ ಜಿಲ್ಲೆಗಳ ಸಪ್ಲೈಕೋ ಗೋದಾಮುಗಳಿಗೆ ಒಂದು ಲಕ್ಷ ಪ್ಯಾಕೆಟ್‍ಗಳು ತಲುಪಲಿವೆ. ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಯಮೋಹನ್ ಮತ್ತು ಕ್ಯಾಪೆಕ್ಸ್ ಅಧ್ಯಕ್ಷ ಎಂ.ಶಿವಶಂಕರಪಿಳ್ಳೆ ಮಾತನಾಡಿ, ಸರ್ಕಾರದ ನಿಲುವು ಗೋಡಂಬಿ ಉದ್ಯಮವನ್ನು ಜಾಗೃತಗೊಳಿಸುತ್ತದೆ. ಗೋಡಂಬಿಯಿಂದ ಗೋಡಂಬಿ ವೀಟಾ ತಯಾರಿಸಿ ಮಕ್ಕಳಿಗೆ ನೀಡುವ ಮತ್ತು ಗೋಡಂಬಿ ಹಣ್ಣಿನಿಂದ ಫೆನಿ ಉತ್ಪಾದಿಸುವ ಯೋಜನೆಯನ್ನು ಸರ್ಕಾರ ಪರಿಗಣಿಸುತ್ತಿದೆ ಎಂದಿರುವರು.
ಲಾಟರಿ ಹೊಡೆದ ಗೋಡಂಬಿ ಉದ್ಯಮ: ಓಣಂ ಕಿಟ್ ಗೆ ವಿಐಪಿ!
0
ಆಗಸ್ಟ್ 02, 2022
Tags