ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಛೇರಿ ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ಜಂಟಿಯಾಗಿ ವಿಶ್ವ ಸೊಳ್ಳೆ ದಿನಾಚರಣೆಯನ್ನು ಆಯೋಜಿಸಿತ್ತು. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಗರಸಭೆ ಅಧ್ಯಕ್ಷೆ ಕೆ.ವಿ. ಸುಜಾತಾ ಉದ್ಘಾಟಿಸಿದರು.
ದಿನಾಚರಣೆ ಅಂಗವಾಗಿ ಜಾಗೃತಿ ವಿಚಾರ ಸಂಕಿರಣ, ಸಮಸ್ಯೆ ಪರಿಹಾರ ಸ್ಪರ್ಧೆಯಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಉಪ ಜಿಲ್ಲಾ ವೈದ್ಯಾಧಿಕಾರಿ ಡಾ.ಗೀತಾ ಗುರುದಾಸ್ ಸಂದೇಶ ನೀಡಿದರು. ಕಾಞಂಗಾಡು ನಗರಸಭಾ ವಾರ್ಡ್ ಕೌನ್ಸಿಲರ್ ಕುಸುಮಾ ಹೆಗ್ಡೆ, ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ವಿನೋದ್ ಕುಮಾರ್ ಮೇಲತ್, ಜಿಲ್ಲಾ ತಾಂತ್ರಿಕ ಸಹಾಯಕ ಕೆ.ಪಿ.ಜಯಕುಮಾರ್, ಜಿಲ್ಲಾ ಆಸ್ಪತ್ರೆಯ ಪಿಎಚ್‍ಎನ್‍ಎಂ ದಾಕ್ಷಾಯಿಣಿ ಮಾತನಾಡಿದರು. ಅಪರ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಎಸ್.ಸಯನಾ ಸ್ವಾಗತಿಸಿ, ಜಿಲ್ಲಾ ಆಸ್ಪತ್ರೆ ಕಿರಿಯ ಆರೋಗ್ಯ ನಿರೀಕ್ಷಕ ಪಿ.ಪಿ.ಮುರಳೀಧರನ್ ವಂದಿಸಿದರು.
ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಆಯೋಜಿಸಿದ್ದ ಜಾಗೃತಿ ವಿಚಾರ ಸಂಕಿರಣದಲ್ಲಿ ಜಿಲ್ಲಾ ವಿಬಿಡಿಸಿ ಅಧಿಕಾರಿ ಎಂ.ವೇಣುಗೋಪಾಲ್ ವಿಷಯ ಮಂಡಿಸಿದರು. ನಂತರ ವಿದ್ಯಾರ್ಥಿಗಳಿಗೆ ನಡೆಸಿದ ಸಮಸ್ಯೆ ಪರಿಹಾರ ಸ್ಪರ್ಧೆಯನ್ನು ಸಾಂಕ್ರಾಮಿಕ ರೋಗ ನಿಯಂತ್ರಣ ಕೋಶದ ಕಿರಿಯ ಆರೋಗ್ಯ ನಿರೀಕ್ಷಕ ಪಿ.ವಿ.ಮಹೇಶ್ ಕುಮಾರ್ ನಡೆಸಿಕೊಟ್ಟರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ. ವಿ ರಾಮದಾಸ್ ಶುಭಹಾರೈಸಿದರು.
ವಿಶ್ವ ಸೊಳ್ಳೆ ದಿನ ಆಚರಣೆ
0
ಆಗಸ್ಟ್ 22, 2022
Tags