HEALTH TIPS

ಚರ್ಮದ ಮೂಲಕ ಮಾನಸಿಕ ಆರೋಗ್ಯವನ್ನು ಪತ್ತೆಹಚ್ಚುಬಹುದು.. ಹೀಗೊಂದು ಸಾಧನವಿದೆ ಗೊತ್ತಾ?

 ದೈಹಿಕ ಸಮಸ್ಯೆಗಳಿದ್ದರೆ ಸಾಮಾನ್ಯವಾಗಿ ಪತ್ತೆಹಚ್ಚಬಹುದು ಆದರೆ ಮಾನಸಿಕ ಅನಾರೋಗ್ಯವಿದ್ದರೆ ಪತ್ತೆ ಹಚ್ಚುವುದು ಸಾಧ್ಯವೇ..?. ಕೆಲವೊಮ್ಮೆ ಇಲ್ಲ. ಕೆಲವರು ಮಾನಸಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅದನ್ನು ತೋರ್ಪಡಿಸಿಕೊಳ್ಳಲಾರರು. ಹಾಗಾದರೆ ಅದನ್ನು ಪತ್ತೆಹಚ್ಚುವುದಾದರೂ ಹೇಗೆ ಎನ್ನುವ ಸಂಶಯಕ್ಕೆ ಉತ್ತರ ನೀಡ ಹೊರಟಿದ್ದಾರೆ ನ್ಯೂಯಾರ್ಕ್‌ ವಿಶ್ವವಿದ್ಯಾನಿಯಲದ ಟಂಡನ್‌ ಸ್ಕೂಲ್‌ ಆಫ್‌ ಎಂಜಿನಿಯರಿಂಗ್‌ನ ಸಂಶೋಧಕರು. ಅದೇನೆಂದರೆ ಮಾನಸಿಕ ಆರೋಗ್ಯವನ್ನು ಪತ್ತೆಹಚ್ಚುವ ಧರಿಸುವಂತಹ ಸಾಧನವನ್ನು ಕಂಡುಹಿಡಿದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ.

ಬಯೋಮೆಡಿಕಲ್‌ ಇಂಜಿನಿಯರಿಂಗ್‌ನ ಅಸೋಸಿಯೇಟ್‌ ಪ್ರೊಫೆಸರ್‌ ಆಗಿರುವಂತಹ ರೋಸ್‌ ಫಾಘಿಹ್‌ ಕಳೆದ ಏಳು ವರ್ಷಗಳಿಂದ ಸಂಶೋಧನೆ ಮಾಡಿ ಮಾನಸಿಕ ಆರೋಗ್ಯವನ್ನು ಪತ್ತೆಹಚ್ಚುವ ಈ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಸಾಧನವು ನಿರ್ದಿಷ್ಟವಾಗಿ ಎಲೆಕ್ಟ್ರೋಡರ್ಮಲ್‌ ಚಟುವಟಿಕೆಯ ಮೂಲಕ ಅಂದರೆ ಚರ್ಮದ ಮೂಲಕ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಕೆಲವು ಮೆದುಳಿನ ಚಟುವಟಿಕೆಯನ್ನು ಮಾಪನ ಮಾಡುತ್ತದೆ.

ಎಲೆಕ್ಟ್ರೋಡರ್ಮಲ್‌ ಚಟುವಟಿಕೆಯು ಕೆಲವು ಭಾವನಾತ್ಮಕ ಒತ್ತಡಗಳ ಆಧಾರದ ಮೇಲೆ ಬದಲಾಗುವ ಚರ್ಮದ ಒಂದು ವಿದ್ಯುತ್‌ ವಿದ್ಯಾಮಾನವಾಗಿದೆ. ಉದಾಹರಣೆಗೆ ಹೇಳುವುದಾದರೆ ನೋವು, ಬಳಲಿಕೆ, ಕೆಲಸದ ಒತ್ತಡವು ವ್ಯಕ್ತಿಯ ಎಲೆಕ್ಟ್ರೋಡರ್ಮಲ್‌ ಚಟುವಟಿಕೆಯನ್ನು ಬದಲಾಯಿಸಬಹುದು. ಮೊದಲ ಬಾರಿಗೆ ಚರ್ಮದ ಮೂಲಕ ಮೆದುಳಿನ ಚಟುವಟಿಕೆಯನ್ನು ನಿಖರತೆಯಿಂದ ಪರೀಕ್ಷಿಸುವಂತಹ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸಾಧನವನ್ನು ಧರಿಸುವವರ ಮಾನಸಿಕ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ, ಹೆಚ್ಚು ಒತ್ತಡದಲ್ಲಿರುವಾಗ ತಟಸ್ಥ ಮನಃಸ್ಥಿತಿಗೆ ಮರಳಲು ಅವರನ್ನು ನೂಕಲು ಇದು ಸಹಾಯ ಮಾಡುತ್ತದೆ. 'ಮೈಂಡ್‌ವಾಚ್‌' ಎಂದು ಕರೆಯಲ್ಪಡುವ ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಸಾಧನವು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಸರಳವಾಗಿ ಹೇಳುವುದಾದರೆ, ಇದನ್ನು ಧರಿಸಿದವರು ತೀವ್ರವಾದ ಕೆಲಸದ ಒತ್ತಡದಲ್ಲಿರುವಾಗ ಇದು ರಿಲ್ಯಾಕ್ಸಿಂಗ್‌ ಸಂಗೀತವನ್ನು ನುಡಿಸುವುದು.

'ಎಲ್ಲಾ ಸಮಯದಲ್ಲೂ ಧರಿಸಬಹುದಾದ ಈ ಸಾಧನವು ಸ್ವನಿಯಂತ್ರಿತ ನರಮಂಡಲವನ್ನು ಸಕ್ರಿಯಗೊಳಿಸುವುದನ್ನು ನಿರ್ಣಯಿಸುತ್ತದೆ ಹಾಗೂ ಮಾನಸಿಕ ಆರೋಗ್ಯ ಮತ್ತು ಯೋಚನೆಗಳನ್ನು ಮಾನಿಟರ್‌ ಮಾಡಲು ಮತ್ತು ಆಲೋಚನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರಾದ ಫಾಘಿಹ್‌.

ಸಾಧನವನ್ನು ಕಂಡುಹಿಡಿದ ಮೇಲೆ ಪರೀಕ್ಷೆ ಮಾಡಲೇಬೇಕಲ್ಲವೇ.. ಈ ಹೊಸ ಸಾಧನವನ್ನು 26 ಆರೋಗ್ಯವಂತ ಜನರ ಮೇಲೆ ಅಳವಡಿಸಲಾಯಿತು.ಇದು ಮೆದುಳಿನ ಸಂಕೇತಗಳನ್ನು ಸುಲಭವಾಗಿ ಅರ್ಥೈಸಬಲ್ಲದು ಹಾಗೂ ಕೆಲವೇ ಸೆಕೆಂಡುಗಳಲ್ಲಿ ಸ್ಪಷ್ಟವಾಗಿ ಭಾಷಾಂತರಿಸಬಲ್ಲದು. ಸಂಶೋಧಕ ಫಾಘಿಹ್‌ ಪ್ರಕಾರ ಇದು ವ್ಯಕ್ತಿಯ ಮನೋಸ್ಥಿತಿಯನ್ನು ಸರಿಹೊಂದಿಸುವುದು ಮಾತ್ರವಲ್ಲ ಇತರ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ ಎನ್ನುತ್ತಾರೆ.

ನರರೋಗ ಅಥವಾ ಮರಗಟ್ಟುವಿಕೆ, ನೋವು ಅಥವಾ ದೌರ್ಬಲ್ಯವನ್ನು ಉಂಟುಮಾಡುವ ತೀವ್ರವಾದ ನರ ಹಾನಿ ಎಂದು ಕರೆಯಲ್ಪಡುವ ಮಧುಮೇಹದ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡಲು ತಂತ್ರಜ್ಞಾನವನ್ನು ಬಳಸಬಹುದು. ಸಣ್ಣ ನರಗಳು ಮಿದುಳಿನ ಪ್ರಚೋದನೆಯನ್ನು ದೇಹದ ಭಾಗಗಳಿಗೆ ರವಾನಿಸುತ್ತವೆ, ಅವುಗಳು ಚರ್ಮದ ವಾಹಕತೆಯ ಪ್ರತಿಕ್ರಿಯೆಗೆ ಸಂಪರ್ಕ ಹೊಂದಿರುತ್ತದೆ. ಈ ಸಾಧನದ ಮೂಲಕ ಎಲೆಕ್ಟ್ರೋಡರ್ಮಲ್‌ ಚಟುವಟಿಕೆಯನ್ನು ಅಳೆಯಬಹುದು. ಹಾಗೂ ಚರ್ಮದ ಮೂಲಕ ನರರೋಗ ಪೀಡಿತ ಅಂಗಾಂಗ ಅಂದರೆ ಕೈಗಳು ಹಾಗೂ ಪಾದದ ಕೆಳಭಾಗದ ಚರ್ಮದ ಮೂಲಕ ಮಾನಿಟರ್‌ ಮಾಡಬಹುದು.  

ಈ ಸಾಧನವನ್ನು ಧರಿಸಿದವರು ನರರೋಗವನ್ನು ಈ ಮೊದಲೇ ಹೊಂದಿದ್ದರೆ ಆ ಸಣ್ಣ ನರಗಳು ಏನನ್ನೂ ರವಾನಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮೆದುಳನ್ನು ಸಕ್ರಿಯಗೊಳಿಸಲಾಗುವುದಿಲ್ಲ. ಮೆದುಳಿನ ಚಟುವಟಿಕೆಯಲ್ಲಿನ ಬದಲಾವಣೆಯನ್ನು ಗಮನಿಸುವ ಮೂಲಕ ಮಾನಸಿಕ ಸ್ಥಿತಿಯ ಬಗ್ಗೆ ವಿಶ್ಲೇಷಣೆ ಮಾಡಲು ಹಾಗೂ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎನ್ನುವುದನ್ನು ನಿರ್ಧರಿಸಲು ಇದು ವೈದ್ಯರಿಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಸಂಶೋಧಕರು.


 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries