ಕಾಸರಗೋಡು: ಮಳೆ ನೀರಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆಯಾಗಿದೆ. ಕುರಂಕುಂಡ್‍ನ ರವೀಂದ್ರನ್ ಅವರ ಪತ್ನಿ ಲತಾ (57) ಅವರ ಮೃತದೇಹವನ್ನು ಪ್ಲ್ಯಾಚಿಕರ ಅರಣ್ಯದಲ್ಲಿ ಹರಿಯುವ ಹೊಳೆಯಲ್ಲಿ ಪತ್ತೆಯಾಗಿದೆ.
ಇಂದು ಬೆಳಗ್ಗೆಯಿಂದ ಶೋಧ ನಡೆಸಿದ ವಿಪತ್ತು ನಿರ್ವಹಣಾ ತಂಡಕ್ಕೆ ಮೃತದೇಹ ಪತ್ತೆಯಾಗಿದೆ. ಮನೆ ಸಮೀಪದ ಹೊಳೆ ಜಲಾವೃತಗೊಂಡಿದ್ದು, ನಿನ್ನೆ ನಾಪತ್ತೆಯಾಗಿದ್ದರು. ವೆಳ್ಳರಿಕುಂಡು ಪೋಲೀಸರು ಮತ್ತು ಪೆರಿಂಗೋತ್ ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಜಂಟಿಯಾಗಿ ಹುಡುಕಾಟ ನಡೆಸಿದ್ದರು.
ನೀರಲ್ಲಿ ಕೊಚ್ಚಿಹೋಗಿದ್ದ ನಿವೃತ್ತ ಶಿಕ್ಷಕಿಯ ಮೃತದೇಹ ಪತ್ತೆ
0
ಆಗಸ್ಟ್ 04, 2022