ಕಾಸರಗೋಡು: ರೈಲು ಹಳಿ ಮೇಲೆ ಕಲ್ಲು, ಸಿಮೆಂಟ್ ಮಿಶ್ರಿತ ಇಟ್ಟಿಗೆ ಇರಿಸುವ ವಿಧ್ವಂಸಕ ಕೃತ್ಯದ ಯತ್ನ ಮುಂದುವರಿದಿದೆ. ಕಾಸರಗೋಡು ರೈಲ್ವೆ ನಿಲ್ದಾಣ ಸನಿಹ ತಳಂಗರೆ ವಠಾರದ ರೈಲ್ವೆ ಹಳಿಯಲ್ಲಿ ಕಿಡಿಗೇಡಿಗಳು ರೈಲ್ವೆ ಹಳಿಯಲ್ಲಿ ಕರ್ಗಲ್ಲುಗಳನ್ನಿರಿಸಿ ರೈಲು ಬುಡಮೇಲುಗೊಳಿಸುವ ಸಂಚು ರೂಪಿಸಿದ್ದು, ರೈಲ್ವೆ ಸಿಬ್ಬಂದಿ ಸಕಾಲಿಕ ಕಾರ್ಯಾಚರಣೆಯಿಂದ ವಿಫಲಗೊಂಡಿದೆ. ರೈಲ್ವೆ ಅಧಿಕಾರಿಗಳ ದೂರಿನನ್ವಯ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಎರಡು ದಿವಸಗಳ ಹಿಂದೆಯಷ್ಟೆ ಹೊಸದುರ್ಗ, ತೃಕ್ಕನ್ನಾಡ್, ಕುಂಬಳೆಯಲ್ಲಿ ರೈಲ್ವೆ ಹಳಿ ಮೇಲೆ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ಈ ಬಗ್ಗೆ ವಿಶೇಷ ತನಿಖಾ ತಂಡ ಜಿಲ್ಲೆಯಲ್ಲಿ ತಪಾಸಣಾ ಕಾರ್ಯ ನಡೆಸುತ್ತಿರುವ ಮಧ್ಯೆ, ಮತ್ತೆ ಹಳಿಯಲ್ಲಿ ಕಲ್ಲುಗಳನ್ನಿರಿಸಿರುವುದರಿಂದ ವ್ಯವಸ್ಥಿತ ಸಂಚು ನಡೆಯುತ್ತಿರುವುದು ಸಾಬೀತಾಗಿದೆ.
ರೈಲ್ವೆ ಹಳಿಯಲ್ಲಿ ಮತ್ತೆ ಕಲ್ಲು: ಕಾಸರಗೋರಿನಲ್ಲಿ ಮರುಕಳಿಸುತ್ತಿರುವ ವಿಧ್ವಂಸಕ ಕೃತ್ಯದ ಯತ್ನ
0
ಆಗಸ್ಟ್ 24, 2022
Tags