ಬದಿಯಡ್ಕ: ಮಲ್ಲಮೂಲೆ ದೈವಸ್ಥಾನ ಪುನರ್ನವೀಕರಣದ ಬಾಬ್ತು ಮಾಡಲಾದ ಅದೃಷ್ಟ ಚೀಟಿ ಬಿಡುಗಡೆ ಕಾರ್ಯಕ್ರಮವು ಮಲ್ಲಮೂಲೆ ತರವಾಡು ಮನೆಯ ಪರಿಸರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಮೂಲೆ ಕುಟುಂಬದ ಹಿರಿಯರಾದ ಕೃಷ್ಣ ಮಣಿಯಾಣಿ ವಹಿಸಿದರು. ಕುಂಬ್ಡಾಜೆ ಗ್ರಾಮ ಪಂಚಾಯತು ನಿಕಟಪೂರ್ವ ಸದಸ್ಯ ಮತ್ತು ಗೋಸಾಡ ಮಹಿಷಮರ್ಧಿನಿ ದೇವಸ್ಥಾನ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಇವರು ಮಲ್ಲಮೂಲೆ ದೈವಸ್ಥಾನ ಪುನರ್ನವೀಕರಣ ಅದೃಷ್ಟ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮಲ್ಲಮೂಲೆ ತರವಾಡು ಆಡಳಿತ ಸಮಿತಿ ಪದಾಧಿಕಾರಿಗಳಾದ ದಾಮೋದರ ಮಲ್ಲಮೂಲೆ, ನಾರಾಯಣ ಮಲ್ಲಮೂಲೆ, ಕೃಷ್ಣ ಮಣಿಯಾಣಿ ಮಲ್ಲಮೂಲೆ, ಭರತ ಮಲ್ಲಮೂಲೆ, ವಿಶ್ವನಾಥ ಮಲ್ಲಮೂಲೆ, ಕುಶಲ ಮಲ್ಲಮೂಲೆ, ಪ್ರಶಾಂತ ಕಲ್ಲಂಗೂಡ್ಲು ಇವರಲ್ಲದೆ ಊರ ಮಹಿಳಾ ಪ್ರತಿನಿಧಿಗಳು, ಕುಟುಂಬಶ್ರೀ ಸದಸ್ಯರು ಹಾಗೂ ಊರ ಸಹೃದಯಿಗಳು ಉಪಸ್ಥಿತರಿದ್ದರು. ಮಾಜಿ ಸೈನಿಕ ಕೃಷ್ಣ ಮಣಿಯಾಣಿ ಮಲ್ಲಮೂಲೆ ಸ್ವಾಗತಿಸಿದರು. ಡಾ. ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಮಣಿಯಾಣಿ ಮಲ್ಲಮೂಲೆ ವಂದಿಸಿದರು.
ಮಲ್ಲಮೂಲೆ ತರವಾಡು ಪುನರ್ವೀಕರಣ ಅದೃಷ್ಟ ಚೀಟಿ ಬಿಡುಗಡೆ.
0
ಆಗಸ್ಟ್ 17, 2022
Tags