ತಿರುವನಂತಪುರ: ಪಾಲಕ್ಕಾಡ್‍ನ ಮಲಂಬುಜಾದಲ್ಲಿ ನಡೆದ ಸಿಪಿಎಂ ನಾಯಕನ ಹತ್ಯೆಗೆ ಸಂಬಂಧಿಸಿದಂತೆ ಸಿಪಿಎಂ ಅನ್ನು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಟೀಕಿಸಿದ್ದಾರೆ.
ಷಹಜಹಾನ್‍ನನ್ನು ಕೊಂದ ದುಷ್ಕರ್ಮಿಗಳು ಪಕ್ಷದ ಸದಸ್ಯರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಹತ್ಯೆಯ ಹೊಣೆಯಿಂದ ಸಿಪಿಎಂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಧಾಕರನ್ ಹೇಳಿದ್ದಾರೆ. ಹತ್ಯೆಯ ಹಿಂದೆ ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರು ಇದ್ದಾರೆ ಎಂಬ ಸಿಪಿಎಂ ಆರೋಪವನ್ನು ಕೆಪಿಸಿಸಿ ಅಧ್ಯಕ್ಷರು ತಳ್ಳಿಹಾಕಿದ್ದಾರೆ.
ತಾನು ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸುತ್ತಿರುವವ. ಆದರೆ ಎಲ್ಲದಕ್ಕೂ ಬಿಜೆಪಿ ಮೇಲೆ ಆರೋಪ ಹೊರಿಸಲಾಗದು, ಬಿಜೆಪಿಯ ಮೇಲೆ ತನಗೆ ಯಾವುದೇ ನಿರ್ದಿಷ್ಟ ಪ್ರೀತಿ ಅಥವಾ ದ್ವೇಷವಿಲ್ಲ ಎಂದು ಸುಧಾಕರನ್ ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರಕಾರಕ್ಕಿಂತ ಸಿಪಿಎಂ ಬಳಿ ಹೆಚ್ಚಿನ ಅಸ್ತ್ರಗಳಿವೆ ಎಂದು ಟೀಕಿಸಿದರು.
ದಾಳಿ ನಡೆಸಿದವರು ಪಕ್ಷದ ಸದಸ್ಯರಲ್ಲ ಎಂದು ಸಿಪಿಎಂ ಮುಖಂಡರು ಹೇಳಿದಾಗ, ಸಿಪಿಎಂ ಕಾರ್ಯಕರ್ತರೂ ಅವರನ್ನು ತಿದ್ದಿದ್ದಾರೆ. ಆ ಮೂಲಕ ಅಲ್ಲಗೆಳೆದಿದ್ದಾರೆ. ಕೊಲೆ ಪ್ರಕರಣದಲ್ಲಿ ಸೂಕ್ತ ತನಿಖೆಯಾಗಬೇಕು. ಷಹಜಹಾನ್‍ನನ್ನು ಸಿಪಿಎಂ ಹತ್ಯೆ ಮಾಡಿರುವುದು ಸ್ಪಷ್ಟವಾಗಿದೆ. ಪೋಲೀಸರು ಆಶಡಳಿತ ಪಕ್ಷಕ್ಕಾಗಿ ದುಡಿಯುತ್ತಿರುವಂತಿದೆ. ರಾಜ್ಯದಲ್ಲಿ ಸಿಪಿಎಂ ನಾಯಕರು ಪೋಲೀಸರನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ಸುಧಾಕರನ್ ಟೀಕಿಸಿದರು.
ಸಿಪಿಎಂ ನಾಯಕನ ಹತ್ಯೆ; ಷಹಜಹಾನ್ ಕೊಲೆಗೆ ಸಿಪಿಎಂ ಪಕ್ಷವೇ ಕಾರಣ: ಎಲ್ಲವನ್ನೂ ಬಿಜೆಪಿ ಮೇಲೆ ಹೊರಿಸಬೇಡಿ: ಕೆ.ಸುಧಾಕರನ್
0
ಆಗಸ್ಟ್ 16, 2022