ಮುಳ್ಳೇರಿಯ: ಚಂದ್ರಗಿರಿ ಪರಯಂಗೋಡು ಕರುವಂಕಲ್ಲು ಮಹಾಲಿಂಗ ಭಟ್ಟ ಉμÁಲಕ್ಷ್ಮಿ ದಂಪತಿ ಪುತ್ರ ಅನಂತಕೃಷ್ಣ(18) ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿ ಇಪ್ಪತ್ತು ದಿನಗಳಿಂದ ಚಿಕಿತ್ಸೆ ಪಡೆದು ಪ್ರಕೃತ ಮನೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ವೈದ್ಯರ ಸೂಚನೆ ಮೇರೆಗೆ ಪೇಂಕ್ರಿಯಾಸ್ ಎಂಬ ಅವಯವಕ್ಕೆ ಸಮಸ್ಯೆಯಾಗಿದ್ದು ವಾಸಿಯಾಗಲು ಎಂಟು ಲಕ್ಷಕ್ಕೂ ಮಿಗಿಲಾದ ವೆಚ್ಚ ಅಗತ್ಯವಿದೆ.
ಸಣ್ಣ ಕೃಷಿಕರಾದ ಮಹಾಲಿಂಗ ಭಟ್ಟರು ಅಡುಗೆ ಕೆಲಸ ವೃತ್ತಿ ಮಾಡುತ್ತಿದ್ದು ಈ ವೆಚ್ಚವನ್ನು ಭರಿಸಲು ಬಹಳ ಕಷ್ಟವಾದ್ದರಿಂದ ಸಹೃದಯರ ಸಹಾಯಸ್ತವನ್ನು ಅಪೇಕ್ಷಿಸಿದ್ದಾರೆ. ದಾನಿಗಳು ತಮ್ಮಿಂದಾದ ಧನಸಹಾಯವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.
ಧನಸಹಾಯ ನೀಡುವವರು ಅವರ ಖಾತೆ ಸಂಖ್ಯೆ ನೀಡಲಾಗಿದ್ದು, ಜಮೆ ಮಾಡಬಹುದಾಗಿದೆ:
MAHALINGA BHAT. K
AC NO 40473100005060
KERALA GRAMIN BANK , BOVIKANA BRANCH
IFSC - KLGB0040473