ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ನಿವಾಸದಲ್ಲಿ ಭದ್ರತಾ ಲೋಪ ಉಂಟಾದ ಪರಿಣಾಮ ಮೂವರು ಸಿಐಎಸ್ಎಫ್ ಕಮಾಂಡೋಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಇದೇ ವಿಷಯವಾಗಿ ವಿಐಪಿ ಭದ್ರತಾ ವಿಭಾಗದ ಇಬ್ಬರು ಹಿರಿಯ ಆಧಿಕಾರಿಗಳನ್ನೂ ವಜಾಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ವಿಐಪಿ ಭದ್ರತೆಯಲ್ಲಿ ಪಟ್ಟಿಯಲ್ಲಿ ದೋವಲ್ ಗೆ ಸಿಐಎಸ್ಎಫ್ ನ ಎಸ್ಎಸ್ ಜಿ ವಿಭಾಗದ ಝೆಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ. ಫೆ.16 ರಂದು ನಡೆದ ಘಟನೆಯಲ್ಲಿ ಸಿಐಎಸ್ಎಫ್ ಕೋರ್ಟ್ ಆಫ್ ಎನ್ಕ್ವೈರಿಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ದೃಢಪಟ್ಟಿದ್ದು, ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.