ಕುಂಬಳೆ : ವಿಶ್ವ ಕಂಡ ಧೀಮಂತ ನಾಯಕ, ಮಾಜಿ ಪ್ರಧಾನಿ, ಅಜಾತ ಶತ್ರು, ಭಾರತ ರತ್ನ, ಹುಟ್ಟು ಹೋರಾಟಗಾರ ಸ್ವರ್ಗಿಯ ಅಟಲ್ ಬಿಹಾರಿ ವಾಜಪೇಯಿ ಅವರ 4 ನೇ ವರ್ಷದ ಸಂಸ್ಮರಣೆ ಬಿಜೆಪಿ ಕುಂಬಳೆ ಮಂಡಲ ಸಮಿತಿ ನೇತೃತ್ವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡುವ ಮೂಲಕ ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಮಂಡಲ ಉಪಾಧ್ಯಕ್ಷ ರಮೇಶ್ ಭಟ್ ಅಧ್ಯಕ್ಷತೆ ವಹಿಸಿದರು.ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ವಿ ರವೀಂದ್ರನ್ ಅವರು ವಾಜಪೇಯಿ ಅವರ ಕುರಿತು ನುಡಿ ನಮನ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್, ಮಂಡಲ ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಉತ್ತರ ವಲಯ ಅಧ್ಯಕ್ಷ ಪ್ರದೀಪ್ ಅರಿಕ್ಕಾಡಿ, ಜನಪ್ರತಿನಿಧಿಗಳಾದ ಪ್ರೇಮಾವತಿ,ಸುಲೋಚನಾ, ಪುಷ್ಪಲತಾ ಕಾಜೂರ್, ಮೋಹನ್ ಬಂಬ್ರಾಣ, ವಿವೇಕಾನಂದ ಶೆಟ್ಟಿ,ಅಜಯ ನಾಯ್ಕಾಪು,ಮಂಡಲ ಸಮಿತಿ ಸದಸ್ಯ ಸುಬ್ರಹ್ಮಣ್ಯ ನಾಯಕ್,ಹಿರಿಯರಾದ ಶಶಿ ಕುಂಬಳೆ, ವರುಣ್ ಕುಮಾರ್ ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ ಸ್ವಾಗತಿಸಿ,ಮಂಡಲ ಉಪಾಧ್ಯಕ್ಷೆ ಪ್ರೇಮಲತಾ ವಂದಿಸಿದರು.
ಕುಂಬಳೆಯಲ್ಲಿ ಅಟಲ್ ಸಂಸ್ಮರಣೆ
0
ಆಗಸ್ಟ್ 17, 2022