ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆಟಿ ಜಲೀಲ್ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಟೀಕೆ ವ್ಯಕ್ತಪಡಿಸಿದ್ದಾರೆ. ಜಲೀಲ್ ದೇಶದ್ರೋಹದ ಅಪರಾಧ ಎಸಗಿದ್ದಾರೆ. ಭಾರತದ ಗಡಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ನಿಲುವು ತಳೆದಿದೆ. ಇನ್ನವರು ಪಾಕಿಸ್ಥಾನಕ್ಕೆ ಹೋಗುವುದು ಉಚಿತ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ತಿಳಿಸಿದರು.
ಸಂಸತ್ತು ಅಂಗೀಕರಿಸಿದ ಕಾಶ್ಮೀರ ನೀತಿಯ ವಿರುದ್ಧ ಕೆ.ಟಿ.ಜಲೀಲ್ ಮಾತನಾಡಿದರು. ಅವರು ಪಾಕಿಸ್ತಾನಿ ಪರ ಭಾμÉಯಲ್ಲಿ ಮಾತನಾಡುತ್ತಿದ್ದರು. ಜಲೀಲ್‍ಗೆ ಭಾರತದಲ್ಲಿ ಉಳಿದುಕೊಳ್ಳುವ ಹಕ್ಕಿಲ್ಲ. ಆತ ಪಾಕಿಸ್ತಾನಕ್ಕೆ ಹೋಗಬೇಕು. ಭಾರತೀಯ ಒಕ್ಕೂಟ, ಸಾರ್ವಭೌಮತ್ವ, ಭಾರತದ ಗಡಿ ಮತ್ತು ಕಾಶ್ಮೀರದ ಮೇಲಿನ ಭಾರತದ ನಿಯಂತ್ರಣವನ್ನು ಒಪ್ಪಿಕೊಳ್ಳದ ವ್ಯಕ್ತಿಯನ್ನು ಭಾರತೀಯ ಎಂದು ಹೇಗೆ ನೋಡಬಹುದು? ಕೆ.ಟಿ.ಜಲೀಲ್ ಅವರ ಸ್ಥಾನ ಪಾಕಿಸ್ತಾನದಲ್ಲಿದೆ, ಭಾರತದಲ್ಲಿ ಅಲ್ಲ.
ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಹೋಗುವುದು ಒಳ್ಳೆಯದು ಎಂದು ಕೆ ಸುರೇಂದ್ರನ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೆ.ಟಿ.ಜಲೀಲ್ ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಟಿಪ್ಪಣಿಯಲ್ಲಿನ ಕೆಲವು ಟೀಕೆಗಳು ವಿವಾದಕ್ಕೆ ಕಾರಣವಾಗಿವೆ. ಕಾಶ್ಮೀರದ ಭಾಗವನ್ನು ಪಾಕಿಸ್ತಾನಕ್ಕೆ ವಿಲೀನಗೊಳಿಸಿದ ಭಾಗವನ್ನು "ಆಜಾದ್ ಕಾಶ್ಮೀರ" ಎಂದು ಕರೆಯಲಾಗುತ್ತಿತ್ತು ಮತ್ತು ಜಮ್ಮು ಮತ್ತು ಕಾಶ್ಮೀರ ಕಣಿವೆ ಮತ್ತು ಲಡಾಖ್‍ನ ಭಾಗಗಳನ್ನು ವಿವಾದಾತ್ಮಕವಾಗಿ ಭಾರತೀಯ ಆಡಳಿತದ ಜಮ್ಮು ಮತ್ತು ಕಾಶ್ಮೀರ ಎಂದು ಉಲ್ಲೇಖಿಸಲಾಗಿದೆ. ರಾಷ್ಟ್ರಮಟ್ಟದಲ್ಲಿಯೂ ಚರ್ಚೆಯಾದ ನಂತರ ಜಲೀಲ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ವಿವಾದಾತ್ಮಕ ಹೇಳಿಕೆಯಲ್ಲಿ ಜಲೀಲ್ ವಿರುದ್ಧ ಬಿಜೆಪಿ ಕಾರ್ಯಕರ್ತ ವಕೀಲರೊಬ್ಬರು ದೆಹಲಿ ಪೋಲೀಸರಿಗೆ ದೂರು ನೀಡಿದ್ದಾರೆ.
ಕೆ.ಟಿ.ಜಲೀಲ್ ಗೆ ಪಾಕಿಸ್ಥಾನವೇ ಹಿತಕರ: ಬೇಗ ಹೋಗುವುದು ಒಳ್ಳೆಯದು: ಕೆ.ಸುರೇಂದ್ರನ್
0
ಆಗಸ್ಟ್ 15, 2022