ಕುಂಬಳೆ: ದೇಶೀಯ ಅಧ್ಯಾಪಕ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವನಿತಾ ಸಂಗಮ ನಡೆಯಿತು. ಸೂರಂಬೈಲು ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವನಿತಾ ವಿಭಾಗ ಸಂಚಾಲಕಿ ಸುಚಿತ ಟೀಚರ್ ಅಧ್ಯಕ್ಷತೆ ವಹಿಸಿದರು. ವನಿತಾ ಸಂಗಮವನ್ನು ಕಾಸರಗೋಡು ನಗರಸಭಾ ಸದಸ್ಯೆ ಸವಿತ ಟೀಚರ್ ಉದ್ಘಾಟಿಸಿ, ಮಹಿಳೆಯರು ನೇತೃತ್ವ ವಹಿಸಿ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಎನ್.ಜಿ.ಒ ಸಂಘ ರಾಜ್ಯ ವನಿತಾ ವಿಭಾಗ ಸಂಚಾಲಕಿ ಆರ್ಯ ಪಿ ಮುಖ್ಯ ಭಾಷಣ ಮಾಡಿದರು. ಸೇವಾ ಸಂಬಂಧಿ ವಿಷಯಗಳ ಕುರಿತು ಎ ಯು ಪಿ ಎಸ್ ಬಾಕ್ರಬೈಲು ಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ರಾವ್ ತರಗತಿ ನಡೆಸಿಕೊಟ್ಟರು. ನಿವೃತ್ತ ಮುಖ್ಯೋಪಾಧ್ಯಾಯಿನಿ, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ ರೇವತಿ , ನಿವೃತ್ತ ಅಧ್ಯಾಪಿಕೆ ವಾರಿಜ ಟೀಚರ್ ಮುಂತಾದವರು ಶುಭ ಹಾರೈಸಿದರು. ಮಂಜೇಶ್ವರ ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಟೀಚರ್ ಸ್ವಾಗತಿಸಿ, ವನಿತಾ ವಿಭಾಗ ಜಿಲ್ಲಾ ಸಮಿತಿ ಸದಸ್ಯೆ ಕವಿತ ಟೀಚರ್ ವಂದಿಸಿದರು. ಕಾಸರಗೋಡು ಉಪಜಿಲ್ಲಾ ಸಮಿತಿ ಸದಸ್ಯೆ ವನಿತಾ ಟೀಚರ್À ಕಾರ್ಯಕ್ರಮ ನಿರೂಪಿಸಿದರು.
ವನಿತಾ ಸಂಗಮ
0
ಆಗಸ್ಟ್ 02, 2022