ಕಾಸರಗೋಡು: ಓಣಂ ಹಬ್ಬದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಆಹಾರದ ಉಚಿತ ಕಿಟ್ ವಿತರಣೆಯ ಜಿಲ್ಲಾಮಟ್ಟದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಸಮಾಜದ ಎಲ್ಲ ಸ್ತರದ ಜನರನ್ನು ಒಟ್ಟುಗೂಡಿಸಿಕೊಂಡು ಸರ್ಕಾರ ಇಂತಹ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದಕ್ಕಾಗಿ ಸರ್ಕಾರ 452 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ.
ಕುಟುಂಬಶ್ರೀ ಕಾರ್ಯಕರ್ತರಿಗೆ ಕಿಟ್ ವಇತರಣೆಯಿಂದ ಪರೋಕ್ಷ ಲಾಭ ಪಡೆದುಕೊಳ್ಳುತ್ತಿದ್ದಾರೆ. ಕುಟುಂಬಶ್ರೀ ವತಿಯಿಂದ ತಯಾರಿಸಿದ ಬೆಲ್ಲ ಅಲ್ಲದೆ ಕುಟುಂಬಶ್ರೀಯಿಂದ ತಯಾರಿಸಿದ ಬಟ್ಟೆಯ ಚೀಲ, ಗೋಡಂಬಿಗಳಿವೆ ಕಿಟ್‍ನಲ್ಲಿ ಒಳಗೊಂಡಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಮಟ್ಟದಲ್ಲಿ ನಡೆದ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಉದ್ಘಾಟಿಸಿದ್ದರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಮನು, ಚೆಂಗಳ ಪಂಚಾಯಿತಿ ಸದಸ್ಯೆ ಪಿ.ಖದೀಜಾ ಉಪಸ್ಥಿತರಿದ್ದರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಶಾಜಿಮೋನ್.ಎನ್.ಜೆ ಸ್ವಾಗತಿಸಿ, ಸಪ್ಲೈಕೋ ಡಿಪೆÇೀದ ಸಹಾಯಕ ವ್ಯವಸ್ಥಾಪಕ ಎಂ.ಗಂಗಾಧರ ವಂದಿಸಿದರು.
ಓಣಂ ಉಚಿತ ಕಿಟ್ ವಿತರಣೆ ಜಿಲ್ಲಾಮಟ್ಟದ ಉದ್ಘಾಟನೆ
0
ಆಗಸ್ಟ್ 24, 2022
Tags