ಕಾಸರಗೋಡು: ಕೋಟೆಕಣಿ ರಾಮನಗರದ ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿ ಆಶ್ರಯದಲ್ಲಿ 20ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಹಾಗೂ 11ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷಸ್ಪರ್ಧೆಯ ಆಮಂತ್ರಣ ಪತ್ರಿಕೆಯನ್ನು ಶ್ರೀರಾಮನಾಥ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಕ್ಷತ್ರಿಯ ಸಮಾಜ ಕುಲಪುರೋಹಿತ ಎಸ್.ಎಲ್.ಭಾರಧ್ವಾಜ್ ಬೇಕಲ್ ಅವರು ಬಿಡುಗಡೆಗೊಳಿಸಿರು.
ಅಷ್ಟಮಿ ಸಮಿತಿ ಅಧ್ಯಕ್ಷ ದಿವಾಕರ ಪಿ.ಅಶೋಕನಗರ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಶ್ರೀರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ ಉಪಸ್ಥಿತರಿದ್ದು ಶುಭಶಂಸನೆಗೈದರು. ಅಷ್ಟಮಿ ಸಮಿತಿ ಕಾರ್ಯದರ್ಶಿ ಕಾವ್ಯಕುಶಲ ಕನ್ನಡಗ್ರಾಮ ಸ್ವಾಗತಿಸಿ, ಕೋಶಾಧಿಕಾರಿ ಶ್ರೀಕಾಂತ್ ಕಾಸರಗೋಡು ವಂದಿಸಿದರು. ಅಶ್ವಿನಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.