ಕುಂಬಳೆ: ಕರ್ನಾಟಕ ಗಮಕ ಕಲಾಪರಿಷತ್ತು ಹಾಗೂ ಸಿರಿಗನ್ನಡ ವೇದಿಕೆ ಕೇರಳ ಘಟಕದ ಆಶ್ರಯದಲ್ಲಿ ನಡೆಯುತ್ತಿರುವ ಗಮಕ ಶ್ರಾವಣ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು(ಆ.28) ಅಪರಾಹ್ನ 2.15 ಕ್ಕೆ ಕುಂಬಳೆ ನಾರಾಯಣಮಂಗಲ ವಿ.ಬಿ.ಕುಳಮರ್ವ ಅವರ ಶ್ರೀನಿಧಿ ಮನೆಯಲ್ಲಿ ನಡೆಯಲಿದೆ.
ನಿವೃತ್ತ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ ದೀಪ ಬೆಳಗಿಸಿ ಉದ್ಘಾಟಿಸುವರು. ಕನ್ನಡ ಭವನದ ವಾಮನ ರಾವ್ ಬೇಕಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ಸಮಾರೋಪ ಭಾಷಣ ಮಾಡುವರು. ಈ ಸಂದರ್ಭ ಜೈಮಿ ಭಾರತದ ಆಯ್ದ ಭಾಗಗಳನ್ನು ಗೋಪಾಲಕೃಷ್ಣ ಭಟ್ ಕೊಚ್ಚಿ ವಾಚಿಸುವರು. ಶ್ರೀಹರಿ ಭಟ್ ಪೆಲ್ತಾಜೆ ವ್ಯಾಖ್ಯಾನಿಸುವರು. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ.
ಗಮಕ ಶ್ರಾವಣ ಸಮಾರೋಪ ಇಂದು
0
ಆಗಸ್ಟ್ 28, 2022