ಕಾಸರಗೋಡು: ಜಿಲ್ಲೆಯ ಪ್ರತಿಯೊಬ್ಬರಿಗೂ ಸಕಲ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿರುವರು.
ಮೊಗ್ರಾಲ್ ಸರ್ಕಾರಿ ಯುನಾನಿ ಡಿಸ್ಪೆನ್ಸರಿಯಲ್ಲಿ ನಿರ್ಮಿಸಿರುವ ನೂತನ ಬ್ಲಾಕ್ ಹಾಗೂ ರಾಷ್ಟ್ರೀಯ ಆಯುμï ಮಿಷನ್ ವತಿಯಿಂದ ನವೀಕರಿಸಿದ ಹಾಗೂ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಒಳಗೊಂಡಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವನ್ನು ಸಚಿವರು ನಿನ್ನೆ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡು ಜಿಲ್ಲೆಯ ಜನರು ಗಡಿ ದಾಟಿ ಕರ್ನಾಟಕದಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇನ್ನು ಬರಬಾರದು. ಸರ್ಕಾರ ಆ ಗುರಿ ಹೊಂದಿದೆ. ಆ ಗುರಿಯನ್ನು ಸಾಧಿಸಲು ರಾಜಕೀಯ ಪಕ್ಷ ಭೇದವಿಲ್ಲದೆ ಎಲ್ಲರೂ ಒಗ್ಗೂಡಬೇಕು ಎಂದು ಸಚಿವರು ಹೇಳಿದರು. ಔಷಧದ ಎಲ್ಲಾ ಕ್ಷೇತ್ರಗಳನ್ನು ಜನರಿಗೆ ತಲುಪಿಸುವ ಮೂಲಕ ವೈದ್ಯಕೀಯ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಯುನಾನಿ ಡಿಸ್ಪೆನ್ಸರಿ ಸಮನ್ವಯದಿಂದ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಹಾಗೂ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪಿಡಬ್ಲ್ಯುಡಿ ಕಟ್ಟಡ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪಿ.ಮುಹಮ್ಮದ್ ಮುನೀರ್ ಹಾಗೂ ರಾಷ್ಟ್ರೀಯ ಆಯುμï ಮಿಷನ್ ಕಾಸರಗೋಡು ಡಿಪಿಎಂ ಕೆ.ಸಿ.ಅಜಿತ್ ಕುಮಾರ್ ವರದಿ ಮಂಡಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇμÁಧಿಕಾರಿ ಇ.ಪಿ.ರಾಜಮೋಹನ್, ಕಾಸರಗೋಡು ಬ್ಲಾಕ್ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲ, ಕುಂಬಳೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷÀ ಎಂ.ಸಾಬೂರ, ಬಿ.ಎ.ರಹ್ಮಾನ್ ಆರಿಕ್ಕಾಡಿ, ನಸೀಮಾ ಖಾಲಿದ್, ಜಿಲ್ಲಾ ಪಂಚಾಯತ್ ಸದಸ್ಯೆ ಜಮೀಲಾ ಸಿದ್ದೀಕ್ ದಂಡಗೋಳಿ, ಗ್ರಾ.ಪಂ.ಉಪಾಧ್ಯಕ್ಷ ನಾಸೀರ್ ಮೊಗ್ರಾಲ್, ಭಾರತೀಯ ವೈದ್ಯಕೀಯ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಜೋಮಿ ಜೋಸೆಫ್, ಕುಂಬಳೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೀತಾ ಕುಮಾರಿ, ಮೊಗ್ರಾಲ್ ಯುನಾನಿ ಡಿಸ್ಪೆನ್ಸರಿ ವೈದ್ಯಾಧಿಕಾರಿ ಕೆ.ಶಾಕಿರ್ ಅಲಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸಿಎ, ಜುಬೇರ್, ಸೈಯದ್ ಹಾದಿ ತಂಙಳ್ ಮೊಗ್ರಾಲ್, ರವಿ ಪೂಜಾರಿ, ರಮೇಶ ಭಟ್, ಜಯರಾಮ ಬಳ್ಳಂಗುಡೇಲು, ತಾಜುದ್ದೀನ್ ಮೊಗ್ರಾಲ್, ಸಿದ್ದೀಕ್ ಮೊಗ್ರಾಲ್, ಅನ್ವರ್ ಹುಸೇನ್ ಆರಿಕ್ಕಾಡಿ ಮೊದಲಾದವರು ಮಾತನಾಡಿದರು. ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಸ್ವಾಗತಿಸಿ, ಉಪಾಧ್ಯಕ್ಷ ನಾಸರ್ ಮೊಗ್ರಾಲ್ ವಂದಿಸಿದರು.